‘ಮಹಿಷ ದಸರವನ್ನು ಆಚರಿಸಲು ನಾವು ಬಿಡಲ್ಲ’ ಎಂದು ಕರಾವಳಿಯ ಕೋಮುವಾದಿ ಭಯೋತ್ಪಾದಕ ಶರಣ್ ಪಂಪ್ವೇಲ್ ಹೇಳಿಕೆ ನೀಡಿದ್ದಾನೆ‌. ನನ್ನ ಒಂದೇ ಪ್ರಶ್ನೆ ಏನೆಂದರೇ, ಈ ದೇಶ ಯಾರಪ್ಪನದಾದರೂ ಸ್ವತ್ತಾ? ನೀನು ಹೀಗೇ ಮಾತಾಡಬೇಕು, ಇದನ್ನೇ ಊಟ ಮಾಡಬೇಕು, ಈ ದೇವರನ್ನೇ ಪೂಜಿಸಬೇಕು, ಇಂತದ್ದೇ ಸಂಸ್ಕೃತಿಯನ್ನು ಆಚರಣೆ ಮಾಡಬೇಕು ಎಂದು ಹೇಳಲು ಇವರೆಲ್ಲ ಯಾವ ಸೀಮೆ ದೊಣೆ ನಾಯಕರು? ದುಡಿಯೋದು ನಾವು, ತಿನ್ನೋದು ನಾವು, ನಮಗಿಷ್ಟ ಬಂದ ದೇವರನ್ನಾದರೂ ಪೂಜಿಸುತ್ತೇವೆ, ದೆವ್ವವನ್ನಾದರೂ ಹೊತ್ತು ತಿರುಗುತ್ತೇವೆ. ಅದು ನಮ್ಮ ಇಷ್ಟ. ಅದನ್ನೆಲ್ಲಾ ಕೇಳೋಕೆ ಈ ಅಪಾಪೋಲಿಗಳಿಗೇನು ಹಕ್ಕಿದೆ? ಇದನ್ನು ಆಚರಿಸು, ಅದನ್ನು ಆಚರಿಸಬೇಡ ಎನ್ನೋಕೆ, ಆಚರಣೆಗಳಿಗೆ ಬೇಕಾದ ಹಣ ಅಥವಾ ಇನ್ನಾವುದೇ ಅನುಕೂಲಗಳನ್ನು ಇವರಪ್ಪಂದಿರ ಖಜಾನೆಯಿಂದ ಕೊಡ್ತಾರಾ? ಇಲ್ಲ ಅಲ್ಲವೇ.

ಹಾಗಿದ್ದರೆ, ಮಹಿಷ ದಸರಾ ತಡೀತೀವಿ ಎನ್ನುವವರಿಗೆ ಮುಟ್ಟಿ ನೋಡಿಕೊಳ್ಳವಂತೆ ನಾವೀಗ ಸರಿಯಾಗಿ ಜಾಡಿಸಬೇಕಿದೆ. ಮೊದಲಿಗೆ ನಾವೆಲ್ಲಾ ಯೋಚಿಸಿದ್ದು ಮೈಸೂರಿನಲ್ಲಿ ಮಾತ್ರ ಮಹಿಷ ದಸಾರ ಆಗಲಿ ಎಂದು. ಆದರೇ, ಅದ್ಯಾವಾಗ ಸಂಸದ ಪ್ರತಾಪ ಸಿಂಹ ತನ್ನ ಉದ್ದಟತನ ತೋರಿ, ಮೈಸೂರಿನಲ್ಲಿ ಮಹಿಷ ದಸರಾ ಆಗಲು ಬಿಡಲ್ಲ ಎಂದನೋ, ಅದನ್ನು ನೋಡಿಕೊಂಡು ಈಗ ಮಂಗಳೂರಿನಲ್ಲೂ ಶರಣ್ ಪಂಪ್ವೆಲ್ ಎಂಬ ಮಂಗವೊಂದು ತನ್ನ ಚೇಷ್ಟೆ ಆರಂಭಿಸಿದೆ. ಕರಾವಳಿಯಲ್ಲಿ ಮಹಿಷ ದಸರಾ ಆಚರಿಸಲು ಬಿಡಲ್ಲ ಎಂದು ಹಲ್ಲು ಕಿರಿಯುತ್ತಿದೆ. ನಾವೀಗ ಮಹಿಷ ದಸಾರಾವನ್ನು ರಾಜ್ಯಪ್ಯಾಪಿಗೊಳಿಸೋಣ. ಅದ್ಯಾವನು ತಡೆಯಲು ಬರುತ್ತಾನೋ ನೋಡೇ ಬಿಡೋಣ. ಚಾಮುಂಡಿಯೂ ನಮ್ಮವಳೇ, ಮಹಿಷನೂ ನಮ್ಮವನೇ. ಇಬ್ಬರಲ್ಲಿ ಯಾರನ್ನಾದರೂ ಆಯ್ಕೆ ಮಾಡಿಕೊಳ್ಳುವ ಹಕ್ಕು ಅಧಿಕಾರ ಮತ್ತು ಸ್ವಾತಂತ್ರ್ಯವೂ ನಮಗಿದೆ‌. ಅಥವಾ ಇಬ್ಬರನ್ನೂ ನಿರಾಕರಿಸುವ ಅಥವಾ ಇಬ್ಬರನ್ನೂ ಹೊತ್ತು ತಿರುಗುವ ಅವಕಾಶವೂ ನಮ್ಮದೆ‌. ಇದನ್ನು ಬೇಡ ಎನ್ನಲು ಅಥವಾ ಇದನ್ನು ಹೀಗೇ ಮಾಡಿ ಎನ್ನಲು ಯಾವನಿಗೂ ಅಧಿಕಾರ ಇಲ್ಲ.

ರಾಜ್ಯದ ಪ್ರತೀ ಜಿಲ್ಲೆಗಳಲ್ಲಿ ಕೇವಲ ಹತ್ತಿಪ್ಪತ್ತು ಜನರ ತಂಡವಾದರೂ ಸರಿ, ಒಂದು ರಸ್ತೆ ಅಥವಾ ಸಣ್ಣ ಸಭಾ ಭವನದಲ್ಲಾದರೂ ಸರಿ, ಅಥವಾ ಯಾರದಾದರೂ ಮನೆಯಲ್ಲಾದರೂ ಸರಿ, ಮಹಿಷನ ಹಬ್ಬವನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ. ಕೋಮುವಾದಿಗಳ ಕಪಿ ಚೇಷ್ಟೆಗೆ ಸಡ್ಡು ಹೊಡೆಯಿರಿ.

ಭಾರತ ಬಹುಸಂಸ್ಕೃತಿಯ ನಾಡು. ನಮ್ಮ ಬಹುತ್ವದ ಆಚರಣೆಗಳನ್ನು ತಡೆಯುವ ಹಕ್ಕು ಅಧಿಕಾರ ಯಾವನಿಗೂ ಇಲ್ಲ. ಯಾವನಾದರೂ ಈ ನಮ್ಮ ಆಚರಣೆಯನ್ನು ತಡೆಯಲು ಬಂದರೇ, ಪೋಲಿಸ್ ಕಂಪ್ಲೇಟ್ ನೀಡಿ. ಸರ್ಕಾರ ತಕ್ಷಣ ದಾಳಿಕೋರರ ಮೇಲೆ ಕಾನೂನು ಕ್ರಮ ವಹಿಸಿ ಜೈಲಿಗೆ ತಳ್ಳಬೇಕು. ಮತ್ತು ಯಾವನಾದರೂ ನಿಮ್ಮ ಮೇಲೆ ದಾಳಿಗೆ ಪ್ರಯತ್ನ ಮಾಡಿದರೇ ನೀವು ನಿಮ್ಮ ಸಂವಿಧಾನದತ್ತವಾದ ಆತ್ಮ ರಕ್ಷಣಾ ಕ್ರಮವನ್ನು ಧೈರ್ಯವಾಗಿ ಕೈಗೊಳ್ಳಿ. ಉದ್ದೇಶಪೂರ್ವಕವಾದ ದಾಳಿಯು ಸಂವಿಧಾನದ ಪ್ರಕಾರ ಅಪರಾಧವಾಗಿದೆ. ಅವರ ಅಪರಾಧಕ್ಕೆ ನಾವು ಬಲಿ ಆಗಬೇಕಿಲ್ಲ. ಸರ್ಕಾರ ರಾಜ್ಯದ ಯಾವುದೇ ಕಡೆ ನಡೆಯುವ ಮಹಿಷ ದಸರಕ್ಕೆ ಸೂಕ್ತ ಬಂದೋಬಸ್ತ್ ಏರ್ಪಡಿಸಿ, ದಾಳಿಕೋರ ಹೇಳಿಕೆಗಳನ್ನು ನೀಡುತ್ತಿರುವ ಮತ್ತು ದಾಳಿ ಮಾಡಲು ಬರುವ ಕೋಮುವಾದಿ ಗೂಂಡಾಗಳನ್ನು ಒದ್ದು ಜೈಲಿಗೆ ಅಟ್ಟುವುದು ಸರ್ಕಾರದ ಜವಾಬ್ದಾರಿ ಆಗಿರುತ್ತದೆ.

ನಾವು ಖಂಡಿತವಾಗಿಯೂ ತಾಯಿ ಚಾಮುಂಡಿಯ ವಿರೋಧಿಗಳು ಅಲ್ಲ. ಆದರೆ, ಚಾಮುಂಡಿಯನ್ನು ಮುಂದು ಮಾಡಿಕೊಂಡು ಕೋಮುವಾದಿ ಗೂಂಡಾಗಿರಿ ಮಾಡಲು ಬರುವ ಬೀದಿ ರೌಡಿಗಳ ಸಹಿಸುವವರೂ ಅಲ್ಲ.

ಹಾಗೆಯೇ, ನಾವೇನು ಮಹಿಷಾಸುರನನ್ನು ಗುತ್ತಿಗೆ ಪಡೆದವರೂ ಅಲ್ಲ. ಆದರೇ ಮಹಿಷ ಎನ್ನುವ ಮೂಲ ನಿವಾಸಿ ತತ್ವದ ಮೇಲೆ ಶೋಷಿತರೆಲ್ಲರೂ ಶೋಷಕರ ವಿರುದ್ದ ನಿಲ್ಲುವ ಮತ್ತು ಆ ಮೂಲಕ ಈ ನೆಲದ ಬಹುತ್ವವನ್ನು ಕಾಪಾಡಿಕೊಳ್ಳುವ ಅವಕಾಶವನ್ನು ಬಿಟ್ಟು ಕೊಡುವವರೂ ಅಲ್ಲ.

ನಾವು ಒಂದು ವಿಚಾರದಲ್ಲಿ ಸ್ಪಷ್ಟವಾಗಿರೋಣ. ಚಾಮುಂಡಿ‌ ಮತ್ತು ಮಹಿಷನ ಬಗ್ಗೆ ಇದೇ ಸತ್ಯ ಎನ್ನುವ, ಐತಿಹಾಸಿಕವಾದ ಯಾವ್ಯಾವ ದಾಖಲೆಗಳು ಇವೆಯೋ, ಇಲ್ಲವೋ, ಅದರಲ್ಲಿ ಇದೇ ಸತ್ಯ ಅಥವಾ ಇದು ಸುಳ್ಳು ಎಂದು ಸಾಧಿಸಿ ತೋರಿಸಲು ಇಲ್ಲಿಯವರೆಗೂ ಯಾರಿಂದಲೂ ಆಗಿಲ್ಲ. ಮಹಿಷ ದುಷ್ಟ, ಚಾಮುಂಡಿ ವೈದಿಕರ ದೇವತೆ ಎನ್ನುವುದೆಲ್ಲವೂ ವೈದಿಕರ ಸುಳ್ಳು ಪುರಾಣಗಳಿಗೆ ಮತ್ತು ದುಷ್ಟತನದ ಆಲೋಚನಾ ಕ್ರಮಕ್ಕೆ ಸಾಕ್ಷಿಯಾಗಿದೆ. ಮೂಲ ನಿವಾಸಿಗಳಲ್ಲೇ ಬೇಧವನ್ನುಂಟು ಮಾಡಿ, ತಮ್ಮ ಕೆಲಸ ಸಾಧಿಸಿಕೊಳ್ಳುವ ನೀಚತನವೂ ಅಡಗಿದೆ. ಹಲವು ವಾದಗಳು ಮತ್ತು ಸಂಶೋಧನೆಗಳಂತೂ ಮಹಿಷ ಮತ್ತು ಚಾಮುಂಡಿ ಇದೇ ನೆಲದ ಮೂಲನಿವಾಸಿಗಳು. ವೈದಿಕರು ಈ ಎರಡೂ ಪೌರಾಣಿಕ ಪಾತ್ರಗಳನ್ನು ದುರುಪಯೋಗ ಪಡಿಸಿಕೊಂಡು ತಮ್ಮ ಬೇಳೆ ಬೇಯಿಸಿಕೋಳ್ಳಲು ತಂತ್ರ ಕುಂತ್ರಗಳನ್ನು ಹೆಣೆದು ತಮ್ಮ ಹೊಟ್ಟೆ ಹೊರೆದುಕೊಳ್ಳುವ ನೀಚ ಮಟ್ಟಕ್ಕೆ ಇಳಿದಿದ್ದಾರೆ.

ಮತ್ತೀಗ ಅದನ್ನೇ ಮುಂದುವರೆಸಿರುವ ಪ್ರತಾಪ ಸಿಂಹನಂತ ಕೋಮುವಾದಿ ಭಯೋತ್ಪಾದಕರು ಚಾಮುಂಡಿ ಮತ್ತು ಮಹಿಷನ ಹೆಸರಲ್ಲಿ ತಮ್ಮ ಭಯೋತ್ಪಾದಕ ರಾಜಕಾರಣವನ್ನು ಮುಂದುವರೆಸಿಕೊಂಡು ಹೋಗುವ ನೀಚತನವನ್ನೇ ಮಾಡುತ್ತಿದ್ದಾರೆನ್ನುವುದು ಮಾತ್ರ ಸುಸ್ಪಷ್ಟವಾಗಿದೆ. ಇವರ ಇಂತಹ ಧಾರ್ಮಿಕ ಭಯೋತ್ಪಾದನೆಗೆ ನಾವು ಅವಕಾಶಗಳನ್ನು ನೀಡದಿರೋಣ. ಚಾಮುಂಡಿ ಮತ್ತು ಮಹಿಷನ ನಡುವೆ ಅವತ್ತು ಅದೇನಾಗಿದೆಯೋ ಅದು ಆಗಿರಲಿ. ಆದರೆ ಅದಕ್ಕಾಗಿ ನಾವಿವತ್ತು ಬಲಿಯಾಗೋದು ಬೇಡ. ನಮ್ಮ ಸಂಪತ್ತಿನ ಭಾರತವನ್ನು ಲೂಟಿಕೋರರ ಕೈಗೆ ಒಪ್ಪಿಸದಿರೋಣ. ಚಾಮುಂಡಿಯೂ ನಮ್ಮವಳೇ, ಮಹಿಷನೂ ನಮ್ಮವನೆಂದು ಇಬ್ಬರನ್ನು ವೈದಿಕರಿಂದ ಬಿಡಿಸಿಕೊಂಡು, ವೈದಿಕರ ಗುಲಾಮರಿಂದ ಕಿತ್ತುಕೊಂಡು ನಡೆಯೋಣ. ಮಹಿಷ ಮತ್ತು ಚಾಮುಂಡಿಯರ ನಡುವಿನ ನಮ್ಮ ಭಿನ್ನಾಭಿಪ್ರಾಯಗಳು ದೇಶದ ಲೂಟಿಕೋರರ ಅಸ್ತ್ರವಾಗದಿರಲಿ. ಅವರ ತಂತ್ರ ಕುತಂತ್ರಗಳು ಮಣ್ಣಾಗಲಿ. ಅವರ ಬಂಡ ಬಾಳಿಗೆ ಬೆಂಕಿ ಬೀಳಲಿ.

ಮಹಿಷ ದಸರಾ ರಾಜ್ಯದ ಮನೆ ಮನೆಯ ಆಚರಣೆಯಾಗಲಿ, ಧಾರ್ಮಿಕ ಗೂಂಡಾಗಳ ಹುಟ್ಟಡಗಿಸುವ ಹಬ್ಬವಾಗಲಿ. ಈ ನೆಲದ ಮಕ್ಕಳ ತಾಕತ್ತಿನ ಪ್ರದರ್ಶನವೇ ಆಗಲಿ. ರಾಜ್ಯದ ಪ್ರತಿ ಜಿಲ್ಲೆ ತಾಲೂಕುಗಳಲ್ಲೂ ಮಹಿಷ ದಸರವನ್ನು ಆಚರಿಸಲು ಮುಂದಾಗಿ. ಈ ಬಾರಿ ಕನಿಷ್ಠ ಸಾಂಕೇತಿಕವಾಗಿಯಾದರೂ ಎಲ್ಲ ಕಡೆಯೂ ಮಹುಷ ದಸರಾ ಆಚರಣೆಯನ್ನು ಪ್ರಾರಂಭಿಸಿ. ಮುಂದೆ ಅದೇ ಈ ನಾಡಿನ ಮೂಲ‌ನಿವಾಸಿಗಳ ರಾಜ್ಯಾಧಿಕಾರದ ತೊಟ್ಟಿಲಾಗುವುದರಲ್ಲಿ ಯಾವ ಅನುಮಾನವೂ ಇಲ್ಲ.
ಜೈ ಭೀಮ್

ಬಿ.ಆರ್.ಭಾಸ್ಕರ್ ಪ್ರಸಾದ್

Leave a Reply

Your email address will not be published. Required fields are marked *