ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಪ್ರಜಾದ್ವನಿಯ ಸಮಾವೇಶದಲ್ಲಿ ʻಕಾಂಗ್ರೇಸ್‌ನ ಕೆಲ ಶಾಸಕರು ವೇಶ್ಯೆಯರು ರೀತಿ ತಮ್ಮ ಹೊಟ್ಟೆ ಪಾಡಿಗಾಗಿ ತನ್ನನ್ನು ಮಾರಿಕೊಂಡ ಹಾಗೆ ತಮ್ಮ ಶಾಸಕ ಸ್ಥಾನವನ್ನು ಮಾರಿಕೊಂಡು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆʼ ಎಂಬಂತಹ ಮಾತುಗಳನ್ನಾಡಿ ಯಡವಟ್ಟು ಮಾಡಿಕೊಂಡಿದ್ದಾರೆ.
17 ಮಂದಿ ಶಾಸಕರು ಬಿಜೆಪಿ ಪಕ್ಷಕ್ಕೆ ಪಲಾಯನ ಮಾಡಿರುವುದನ್ನು ವೇಶ್ಯೆಯರು ತಮ್ಮ ಹೊಟ್ಟೆಪಾಡಿಗಾಗಿ ತಮ್ಮನ್ನು ಮಾಡಿಕೊಂಡಂತೆ ಶಾಸಕರು ತಮ್ಮ ಸ್ಥಾನವನ್ನು ಮಾಡಿಕೊಂಡಿದ್ದಾರೆ ಎನ್ನುವ ಅವಹೇಳನಕಾರಿ ಹೇಳಿಕೆಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ತಿರುಗೇಟು ನೀಡಿದ್ದು,
ಬಿ.ಕೆ.ಹರಿಪ್ರಸಾದ್ ಯಾವ ಚುನಾವಣೆಯನ್ನು ಗೆದ್ದು ಬಂದಿದ್ದಾರೆ? ಹಿಂಬಾಗಿಲಿನಿಂದ ಬಂದು ಎಂ.ಎಲ್.ಸಿ. ಆಗಿದ್ದಾರೆ. ಹಿಂಬಾಗಿಲಿನಿಂದ ಬಂದ ಇವರನ್ನು ಪಿಂಪ್ ಎನ್ನಬಹುದೇ ಎಂದು ತಿರುಗೇಟು ನೀಡಿದ್ದಾರೆ.