ಬಿಗ್‌ಬಾಸ್ ಸೀಸನ್ 11 ಶುರುವಾಗಿ 50 ದಿನಗಳನ್ನು ಪೂರೈಸಿದೆ.ದಿನಗಳು ಕಳೆಯುತ್ತಿರುವಂತೆ ಅನೇಕ ತಿರುವುಗಳನ್ನು ಪಡೆದುಕೊಂಡಿದೆ.ಇದರ ನಡುವೆ ಈ ವಾರದ ನಾಮಿನೇಷನ್ ಪ್ರಕ್ರಿಯೆಯು ಮುಗಿದಿದ್ದು, ಮನೆಯಿಂದ ಔಟ್ ಅಗಿ ಹೋಗಲು 7 ಸ್ಪರ್ಧಿಗಳ ಹೆಸರನ್ನು ಸೂಚಿಸಿದ್ದಾರೆ.
ಈ ವಾರ ದೊಡ್ಮನೆಯಿಂದ ಹೊರಹೋಗುವ ಸ್ಪರ್ಧಿಗಳ ಪಟ್ಟಿ ಹೀಗಿದೆ. ತ್ರಿವಿಕ್ರಮ್, ಮೋಕ್ಷಿತಾ, ಚೈತ್ರಾ ಕುಂದಾಪುರ, ಉಗ್ರಂ ಮಂಜು, ಧರ್ಮ,ಗೌತಮಿ, ಮತ್ತು ಜಾನಪದ ಗಾಯಕ ಹನುಮಂತ ನಾಮಿನೇಟ್ ಆಗಿರುವ ಕಂಟೆಸ್ಟಂಟ್‌ಗಳಾಗಿದ್ದಾರೆ. ಇಷ್ಟೂ ಸ್ಪರ್ಧಿಗಳಲ್ಲಿ ಒಬ್ಬರದ್ದು ಈ ವಾರ ಜರ್ನಿ ಕೊನೆಗೊಳ್ಳುತ್ತದೆ. ಈ ಮನೆಯಲ್ಲಿ ತಮ್ಮ ಜರ್ನಿಯನ್ನು ಮುಂದುವರೆಸಬೇಕಾದರೆ ಸಹ ಸ್ಪರ್ಧಿಗಳ ಜೊತೆ ಆಟವನ್ನು ಪ್ರದರ್ಶಿಸುವ ಮೂಲಕ ತಮ್ಮ ಸ್ಥಾನವನ್ನು ಭದ್ರಮಾಡಿಕೊಳ್ಳಬೇಕಿದೆ.
ದೊಡ್ಮನೆಯ ಸ್ಪರ್ಧಿಗಳ ನಡುವೆ ನಡೆದ ನಾಮಿನೇಷನ್ ಪ್ರಕ್ರಿಯೆ ಮುಗಿದ ಮೇಲೆ ಪ್ರೇಕ್ಷಕರ ಮನಸ್ಸಲ್ಲಿ ಹಲವಾರು ರೀತಿಯ ಯೋಚನೆಗಳು ಒಡುತ್ತಿವೆ. ಈ ವಾರ ಮನೆಯಿಂದ ಯಾರು ಆಚೆ ಹೋಗ್ತಾರೆಎನ್ನುವುದರ ಬಗ್ಗೆ ಚರ್ಚೆಗಳು ಶುರುವಾಗಿವೆ. ಧನರಾಜ್, ಭವ್ಯ,ಐಶ್ವರ್ಯ,ಗೋಲ್ಡ್ ಸುರೇಶ್,ಶಿಶಿರ್ ಮತ್ತು ವೈಲ್ಡ್ ಕಾರ್ಡ್ ಮೂಲಕ ಮನೆಗೆ ಆಗಮಿಸಿರುವ ಶೋಭಾ ಶೆಟ್ಟಿ ಮತ್ತು ರಜತ್ ಸದ್ಯ ಈ ವಾರದ ನಾಮಿನೇಷನ್‌ನಿಂದ ಪಾರಾಗಿದ್ದು, ಕಳೆದ ವಾರವಷ್ಟೇ ಅನುಷಾ ರೈ ತಮ್ಮ ಜರ್ನಿಯನ್ನು ಮುಗಿಸಿಕೊಂಡು ಮನೆಯಿಂದ ಆಚೆ ಬಂದಿದ್ದಾರೆ.