ನಾಡ ದೇವತೆ ಚಾಮುಂಡೇಶ್ವರಿಯ ವಿಚಾರದಲ್ಲಿ ಕವಿ, ಪ್ರೊ.ಕೆ. ಎಸ್ ಭಗವಾನ್‌ರವರು  ಜನರ ನಂಬಿಕೆಯನ್ನು, ಮತ್ತು ಜನರ ದಾರಿ ತಪ್ಪಿಸಲು ಯತ್ನಿಸುತ್ತಿದ್ದಾರೆ. ಅವರ ಮಾತಿಗೆ ಯಾರೂ ಸೊಪ್ಪು ಹಾಕಬೇಡಿ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಬಸವರಾಜ್ ಬೊಮ್ಮಾಯಿರವರು ತಿಳಿಸಿದ್ದಾರೆ.

ಗದಗದಲ್ಲಿಂದು  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಗವಾನ್‌ರವರಿಗೆ ದೇವರ ಮೇಲೆ ನಂಬಿಕೆಯಿದೆ ಆದ್ದರಿಂದ ಅವರು ಆ ಹೆಸರನ್ನು ಇಟ್ಟುಕೊಂಡಿದ್ದಾರೆ. ದೇವರ ಮೇಲೆ ನಂಬಿಕೆಯಿಲ್ಲದಿದ್ದರೆ ಭಗವಾನ್‌ ಎಂದು ಏಕೆ ಹೆಸರಿಟ್ಟುಕೊಂಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಧರ್ಮದ ವಿರುದ್ದ ಮಾತನಾಡುವುದು ಹೇಳಿಕೆ ನೀಡುವುದು ಮಾನವೀಯತೆ ಅಲ್ಲ. ತಾಯಿ ಚಾಮುಂಡೇಶ್ವರಿಯನ್ನು ಕಾಲ್ಪನಿಕವೆಂದು ಹೇಳುವುದಾದರೆ ಮಹಿಷಾಸುರನು ಕಾಲ್ಪನಿಕವಲ್ಲವೇ? ಇವರ ದ್ವಂದ್ವ ಮನಸ್ಥಿತಿಯಿಂದ ಜನರ ಎಮೋಷನ್‌ ಜೊತೆ ಆಟವಾಡಿ, ಜನರ ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಆದ್ದರಿಂದ ಇವರ ಯಾವುದೇ ಹೇಳಿಕೆಗೆ ಮಹತ್ವವನ್ನು ಕೊಡಬಾರದು. ಈ ಹಿಂದೆಯೂ ಇದಕ್ಕೆ ಮಹತ್ವ ಕೊಡಲಿಲ್ಲ. ಇನ್ನು ಮುಂದೆಯೂ ಯಾರೂ ಕೊಡಬಾರದೆಂದು ತಿಳಿದ್ದಾರೆ.

Leave a Reply

Your email address will not be published. Required fields are marked *