ಬೆಂಗಳೂರು: ಗುಂಡಿ ಮುಚ್ಚಲು ಗಡವು ನೀಡಿದ್ರಲ್ಲ? ಇವಾಗ ಏನಾಯಿತು? ಜನರ ಕಷ್ಟ ನಿಮಗೆ ತಿಳಿಯುತ್ತಿಲ್ವಾ?ಬಾರೀ ಮಳೆ ಸುರಿದ ಕಾರಣ ರಸ್ತೆಗಳೆಲ್ಲಾ ನೀರು ತುಂಬಿ ಕೆರೆಯಂತಾಗಿವೆ ಕಾಂಗ್ರೆಸ್ಸಿನವರನ್ನು ತರಾಟೆಗೆ ತೆಗೆದುಕೊಂಡ ಹೆಚ್.ಡಿ.ಕುಮಾರಸ್ವಾಮಿ.
ರಾಜ್ಯ ರಾಜಧಾನಿಯಲ್ಲಿ ಬಾರೀ ಮಳೆಯಿಂದಾಗಿ ಮನೆಗಳಿಗೆಲ್ಲಾ ನೀರು ನುಗ್ಗಿ ಬಡಾವಣೆಗಳೆಲ್ಲಾ ಕೆರೆಯಂತೆ ಆಗಿರುವುದಲ್ಲದೆ ರಸ್ತೆಗಳು ಜಲಾವೃತಗೊಂಡು ಜನರ ಪರದಾಡುವ ಪರಿಸ್ಥಿತಿ ಬಂದೊದಗಿದೆ ಎಂದು ಹೆಚ್.ಡಿ.ಕುಮಾರಸ್ವಾಮಿಯವರು ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ಹೆಚ್ಚು ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿ ಕುಟುಂಬಗಳು ಸಂಕಷ್ಟಕ್ಕೆ ಈಡಾಗಿದ್ದಾರೆ.ಗುಂಡಿಗಳನ್ನು ಮುಚ್ಚಲು ಗಡುವನ್ನು ನೀಡಿ ಏನೋ ಇವರೇ ಗುಂಡಿಗಳನ್ನೆಲ್ಲಾ ಮುಚ್ಚುವ ಹಾಗೆ ಹಾರೆ, ಸೆನಿಕೆ ಹಿಡಿದು ಹೋಗಿದ್ದರಲ್ಲಾ ಏನಾಯಿತು? ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯ ಅವಾಂತರದಿಂದ ರಸ್ತೆಗಳಲ್ಲಿ ನೀರು ತುಂಬಿ ಕೆರೆಯಂತಾಗಿದ್ದರೂ ಕಿಂಚಿತ್ತೂ ತಲೆ ಕೆಡಿಸಿಕೊಳ್ಳದ ಸರ್ಕಾರದ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.