ಬೆಂಗಳೂರು: ನವೆಂಬರ್ ಕೊನೆಯ ವಾರದಿಂದ ಶುರುವಾಗಿ ಫೆಬ್ರವರಿ ಕೊನೆಯಾಗುವ ಅಯ್ಯಪ್ಪ ಸ್ವಾಮಿ ಮಾಲೆಯನ್ನು ಧರಿಸಿ ಅಯ್ಯಪ್ಪಸ್ವಾಮಿ ದೇವಸ್ತಾನಕ್ಕೆ ಹೋಗುವ ಆಚರಣೆಯನ್ನು ಮಾಡುತ್ತಾರೆ. ಆ ಕಾರಣಕ್ಕಾಗಿ ಅಯ್ಯಪ್ಪ ಮಾಲಾಧಾರಿಗಳಿಗೆ ಕೆಎಸ್‌ಆರ್‌ಟಿಸಿ ಸಿಹಿಸುದ್ದಿಯನ್ನು ನೀಡಿದೆ. ಹೌದು ಮೊದಲ ಬಾರಿ ಕೆಎಸ್‌ಆರ್‌ಟಿಸಿಯಿಂದ ಶಬರಿಮಲೆಗೆ ವೋಲ್ಟೋ ಬಸ್ ಸಂಚರಿಸಲಿದ್ದು ಭಕ್ತಾಧಿಗಳು ಯಾವ ತೊಂದರೆಯಿಲ್ಲದೆ ಪ್ರಯಾಣ ಮಾಡಬಹುದಾಗಿದೆ.
ಕೆಎಸ್‌ಆರ್‌ಟಿಸಿ ಬಸ್ ಸಂಚಾರವು ಇದೇ ನವೆಂಬರ್ ತಿಂಗಳ 29ನೇ ತಾರೀಖಿನಿಂದ ಶುರುವಾಗುತ್ತದೆ.ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಹೋಗುವ ಕಾಲವಾಗಿರುವುದರಿಂದ ಪ್ರಯಾಣಿಕರ ಒಳಿತಿಗಾಗಿ ಇದೇ ಮೊದಲ ಬಾರಿ ಕೆಎಸ್‌ಆರ್‌ಟಿಸಿ ಬಸ್ಸುಗಳು ಬೆಂಗಳೂರಿನಿಂದ ಶಬರಿಮಲೆಗೆ ಪ್ರಯಾಣ ಮಾಡಬಹುದಾಗಿದೆ.
ಬೆಂಗಳೂರಿನ ಶಾಂತಿನಗರದಿಂದ ಶಬರಿಮಲೆಗೆ ನೀಲಕ್ಕಲ್‌ಗೆ ತೆರಳುವ ಶುಲ್ಕ 1,750ರೂಗಳ ದರವನ್ನು ನಿಗದಿ ಮಾಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಮಾಹಿತಿ ನೀಡಿದೆ.