ಚುನಾವಣೆ ಸಮೀಪ ಇರುವಾಗಲೇ ಪ್ರಚಾರಗಳು ಜೋರಾಗಿ ಸದ್ದು ಮಾಡುತ್ತಿರುವುದು ಎಲ್ಲರಿಗೂ ತಿಳಿದಿದೆ. ಇದರ ನಡುವೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಮಾತಿನ ಚಕಮಕಿಗಳು ನಡೆಯುತ್ತಿವೆ.
ಕಾಂಗ್ರೆಸ್ ಪಕ್ಷದವರು ಮೊದಲಿಂದಲೂ ಟಿಪ್ಪು ಟಿಪ್ಪು ಅಂತ ಟಿಪ್ಪು ಪರವಾಗಿದ್ದಾರೆ. ಆದರೆ ಬಿಜೆಪಿಗರು ಟಿಪ್ಪು ಒಬ್ಬ ದೇಶದ್ರೋಹಿ ಎಂದು ವಿರೋಧಿಸಿಕೊಂಡೇ ಬರುತ್ತಿದ್ದಾರೆ. ಇದರ ನಡುವೆ ಅಶ್ವತ್ಥ್‌ನಾರಾಯಣ್ ನಾಲಿಗೆಯನ್ನು ಹರಿಬಿಟ್ಟು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಟಿಪ್ಪುವನ್ನು ಕೊಂದ ರೀತಿಯಲ್ಲಿಯೇ ಸಿದ್ದರಾಮಯ್ಯನನ್ನು ಕೊಲ್ಲಬೇಕು (ಟಿಪ್ಪುವನ್ನು ಹೊಡೆದ ರೀತಿಯಲ್ಲಿಯೇ ಸಿದ್ದರಾಮಯ್ಯನನ್ನು ಹೊಡೆಯಬೇಕು) ಎಂಬ ವಿವಾದಾತ್ಮಕ ಹೇಳಿಕೆಯನ್ನ ನೀಡಿರುವುದು ರಾಜಕೀಯ ರಂಗದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಮಂಡ್ಯದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಯಕರ್ತರನ್ನು ನಿಮಗೆ ಸಾವರ್ಕರ್ ಬೇಕಾ? ಟಿಪ್ಪು ಬೇಕಾ ಎಂದು ಪ್ರಶ್ನೆ ಕೇಳಿದ್ದಾರೆ. ಈ ವೇಳೆ ಸಾವರ್ಕರ್ ಬೇಕು ಎಂಬ ಉತ್ತರ ಬಂದಿದ್ದೆ ತಡ ಈ ಹೇಳಿಕೆಯನ್ನ ನೀಡಿದ್ದಾರೆ.