ಬಿಗ್‌ಬಾಸ್ ಮನೆಯಲ್ಲಿ ದಿನಕ್ಕೊಂದು ಗಲಾಟೆ ನಡೆಯುತ್ತಿದ್ದು ಇಂದು ರೀಲಿಸ್ ಆದ ಪ್ರೋಮೊದಲ್ಲಿ ಧರ್ಮ ಮತ್ತು ಅನುಷಾ ನಡುವೆ ಕಿಚ್ಚು ಹೊತ್ತಿ ಉರಿಯುತ್ತಿರುವುದು ಬೆಳಕಿಗೆ ಬಂದಿದ್ದು, ಈ ಜೋಡಿಹಕ್ಕಿಗಳಿಗೇನಾಯಿತು ಎಂದು ಚರ್ಚೆ ಶುರುವಾಗಿದೆ.
ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳು ನೇರವಾಗಿ ನಾಮಿನೇಷನ್ ಮಾಡುವ ಹಾಗೆ ಬಿಗ್‌ಬಾಸ್ ಸೂಚಿಸಿದ್ದರು.ಅದರಂತೆಯೇ ಧರ್ಮ ಅನುಷಾ ಮತ್ತು ಗೋಲ್ಡ್ ಸುರೇಶ್ ಅವರ ಹೆಸರುಗಳನ್ನು ಹೇಳ್ತಾರೆ. ಇನ್ನೂ ಗೌತಮಿ, ಐಶ್ವರ್ಯ, ಚೈತ್ರಾ, ಮೋಕ್ಷಿತಾ ಸೇರಿದಂತೆ ಕೆಲವು ಸ್ಪರ್ಧಿಗಳು ಅನುಷಾರನ್ನು ನಾಮಿನೇಟ್ ಮಾಡಿದ್ದಾರೆ.
ಬಹುತೇಕರು ನಾಮಿನೇಟ್ ಮಾಡಿದ ಕಾರಣಕ್ಕಾಗಿ ಕೋಪಗೊಂಡ ಅನುಷಾ ಪ್ರತಿಯೊಬ್ಬರಿಗೂ ಪ್ರಶ್ನೆ ಮಾಡಿದ್ದಾರೆ. ಮೊದಲು ಮೋಕ್ಷಿತಾರವರನ್ನು ಮೋಕ್ಷಿತಾ ನೀವೆಷ್ಟು ಎಂಟರ್ಟೈನಿಂಗ್ ಆಗಿದ್ದೀರಾ? ಎಂದು ಎಲ್ಲರಿಗೂ ಗೊತ್ತು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನೂ ಧರ್ಮ ಸರದಿ ಬಂದಾಗ ಅಗ್ರೇಷನ್ ಕಡಿಮೆ ಆಯ್ತು ಎಂದು ನನಗೆ ಹೇಳ್ತಿದ್ದೀರಾ? ನಿಮಗೆ ಎಷ್ಟು ಅಗ್ರೇಷನ್ ಇದೆ? ನೀವೆನೂ ಆಟನೇ ಆಡುವುದಿಲ್ಲ.ನೀವೆಷ್ಟರ ಮತ್ತಿಗೆ ಇನ್ವಾಲ್ ಆಗಿದ್ದೀರಾ? ಎಂದು ವಾಗ್ದಾಳಿ ನಡೆಸಿದ್ದಾರೆ.ಸಮರ್ಥನೆ ಮಾಡಿಕೊಳ್ಳಲು ಹೋದ ಧರ್ಮ, ಆಯ್ತು ನಾನೇ ಹೇಳ್ತಿದ್ದಿನಲ್ಲ ನನ್ನನ್ನು ನಾಲಾಯಕ್ ಎಂದು ಕ್ಯಾಕರಿಸಿ ಉಗಿದಿದ್ದಾರೆ ಇನ್ನೂ ಬೇವರ್ಸಿ ಅಂತ ಹೇಳೊದೊಂದು ಬಾಕಿ ಎಂದು ಹೇಳಿದ್ದಾರೆ.
ಇವರಿಬ್ಬರ ಜಗಳವನ್ನು ನೋಡಿದ ಪ್ರೇಕ್ಷಕರು ಅನುಷಾ ಧರ್ಮ ಚೆನ್ನಾಗಿಯೇ ಇದ್ದರಲ್ವಾ, ಇವಾಗ ಅವರಿಗೆ ಏನಾಯಿತು? ಇವರಿಬ್ಬರ ಜಗಳಕ್ಕೆ ಕಾರಣವೇನು? ಎಂಬೆಲ್ಲಾ ಚರ್ಚೆಗಳು ನಡೆಯುತ್ತಿದ್ದು, ಇವತ್ತಿನ ಸಂಚಿಕೆಯಲ್ಲಿ ಏನಾಗಬಹುದು ಎಂಬುದನ್ನು ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.