ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಇಂದು ಮುಂಜಾನೆಯಿಂದಲೇ ಗುಡುಗು ಸಹಿತ ಮಳೆ ಬಂದಿದ್ದು ನಗರದ ಅಂಗನವಾಡಿ ಮತ್ತು ಶಾಲೆಗಳಿಗೆ ರಜೆಯನ್ನು ಘೋಷಣೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶವನ್ನು ಹೊರಡಿಸಲಾಗಿದೆ ಎಂದು ತಿಳಿದುಬಂದಿದೆ.
ಶಿಶುವಿಹಾರಗಳು ಮತ್ತು ಎಲ್‌ಕೆಜಿ, ಯುಕೆಜಿ .ಅಂಗನವಾಡಿಗಳಿಗೆ ರಜೆಯಲ್ಲಿ ಘೋಷಿಸಿದ್ದು , ಸರ್ಕಾರಿ ಮತ್ತು ಪ್ರವೇಟ್ ಶಾಲೆಗಳಪ್ರಾಥಮಿಕ, ಪ್ರೌಢಶಾಲೆಗಳು, ಅನುದಾನಿತ ಶಾಲೆಗಳು, ಅನುದಾನ ರಹಿತ ಶಾಲೆಗಳೆಲ್ಲವೂ ಸೇರಿದಂತೆ ನಗರದ ಎಲ್ಲಾ ಶಾಲೆಗಳಿಗೆ ರಜೆಯನ್ನು ಘೋಷಿಸಲು ಬೆಂಗಳೂರಿನ ಜಿಲ್ಲಾಧಿಕಾರಿಯಾದ ಜಗದೀಶ್‌ರವರು ಆದೇಶವನ್ನು ಹೊರಡಿಸಿದ್ದಾರೆ.
ಈ ಒಂದು ದಿನದ ಮಟ್ಟಿಗೆ ಈ ಆದೇಶ ಜಾರಿಯಾಗಲಿದೆ. ಹೆಚ್ಚು ಮಳೆಯಾಗಿರುವ ಕಾರಣ ಮುನ್ನೆಚ್ಚರಿಯನ್ನು ಕೈಗೊಳ್ಳಲಾಗುತ್ತಿದೆ ಎಂದು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ .