ಕೊಪ್ಪಳ :ಅಂಗನವಾಡಿಯ ಮೇಲ್ಚಾವಣಿ ಬಿಸ್ಸು 4 ಮಕ್ಕಳಿಗೆ ಗಂಭೀರ ಗಾಯಗಳಾಗಿರುವ ಘಟನೆಯು ಗಂಗಾವತಿಯ ಮೆಹಬೂಬ ನಗರದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ಅಂಗನವಾಡಿಯಲ್ಲಿ ಮಕ್ಕಳು ಪಾಠ ಕೇಳುತ್ತಿರುವ ವೇಳೆಯಲ್ಲಿ ಮೇಲ್ಚಾವಣಿಯ ಸೀಲಿಂಗ್ ಬಿದ್ದು ಮನ್ವಿತ್, ಸುರಕ್ಷಾ, ಅಮನ್, ಮರ್ದನ್ ಎಂಬ ಮಕ್ಕಳಗೆ ತೀರ ಗಂಭೀರ ಗಾಯಗಳಾಗಿದ್ದು ಸದ್ಯ ತಾಲ್ಲೂಕು ಆಸ್ಪತ್ರೆಗೆ ಸೇರಿಸಲಾಗಿರುವ ಘಟನೆಯು ನಡೆದಿದೆ.
ಈ ಅಂಗನವಾಡಿಯನ್ನು ನಿರ್ಮಾಣ ಮಾಡಿ ಬರೋಬ್ಬರಿ 7 ವರ್ಷಗಳಾಗಿದ್ದು ಹಳೇ ಕಟ್ಟಡವಾಗಿದ್ದರಿಂದ ಈ ಘಟನೆಯು ನಡೆದಿದೆ ಎನ್ನಲಾಗಿದೆ.