ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಚೌಬೆ ಚಾಪ್ರಾ ಗ್ರಾಮದಲ್ಲಿ ಡಾ.ಬಿ.ಅಂಬೇಡ್ಕರ್‌ ಪ್ರತಿಮೆಯನ್ನು ನಾಶಗೊಳಿಸಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಂಬೇಡ್ಕರ್‌ ಪ್ರತಿಮೆಯನ್ನು ನಾಶಪಡಿಸಿದ್ದಕ್ಕಾಗಿ ಆರೋಪಿ ಚಂದ್ರಶೇಖರ್‌ ಸಿಂಗ್‌ ಎಂಬಾತನನ್ನು ಬಂಧಿಸಲಾಗಿದ್ದು ಈ ಘಟನೆಯು ಶುಕ್ರವಾರ ತಡರಾತ್ರಿ ನಡೆದಿದೆ ಶನಿವಾರ ಬೆಳಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆ ಗ್ರಾಮದ ಸ್ಥಳೀಯರು ನೀಡಿದ ದೂರಿನನ್ವಯ ಎಫ್‌ ಐ ಆರ್‌ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಎಸ್.ಪಿ.ದುರ್ಗಾ ಪ್ರಸಾದ್‌ ತಿವಾರಿ ತಿಳಿಸಿದ್ದಾರೆ. ಹಾನಿಯಾಗಿದ್ದ ಪ್ರತಿಮೆಯ ಭಾಗವನ್ನು ಸರಿಪಡಿಸಲಾಗಿದ್ದು ಗ್ರಾಮದ ಪರಿಸ್ಥಿತಿ ಶಾಂತಿಯಿಂದಿದೆ ಎಂದಿದ್ದಾರೆ.

ಉತ್ತರ ಪ್ರದೇಶದಲ್ಲಿ ಇಂಥ ವಿಛಿದ್ರಕಾರಿ ಘಟನೆಗಳು ಆಗಿಂದಾಗ್ಗೆ ನಡೆಯುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ. ಆದರೂ ಪೊಲೀಸರು ಇಂಥ ದುರ್ಘಟನೆಗಳನ್ನು ತಡೆಯಲು ಕ್ರಮ ಕೈಗೊಳ್ಳದಿರುವುದು ದುರಂತ ಎಂದು ಅಲ್ಲಿನ ಸ್ಥಳೀಯ ಮುಖಂಡರು ಅಳಲು ತೋಡಿಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *