ಬೆಂಗಳೂರು: ಲೋಕಾಯುಕ್ತ ಮತ್ತು ಎಸ್‌ಐಟಿಯ ಆಫೀಸರ್‌ಗಳ ವರ್ಕ್‌ಗೆ ಅಡ್ಡಗಾಲು ಹಾಕಿದರೆ ಪೊಲೀಸರು ಸೂಕ್ತ ಕ್ರಮವನ್ನು ಕೈಗೊಳ್ಳುತ್ತಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಎಚ್ಚರಿಕೆಯನ್ನು ನೀಡಿದ್ದಾರೆ.
ಎಡಿಜಿಪಿ ಚಂದ್ರಶೇಖರ್ ಮತ್ತು ಹೆಚ್‌ಡಿ ಕುಮಾರಸ್ವಾಮಿಯವರ ವಾದ ಪ್ರತಿವಾದಗಳ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಡಿಜಿಪಿ ಚಂದ್ರಶೇಖರ್ ಮುಖಾಂತರ ನಡೆಯಲಿರುವ ಎಸ್‌ಐಟಿಯನ್ನು ಕಾನೂನಾತ್ಮಕವಾಗಿ ರಚಿಸಲಾಗಿದ್ದು ಅವರ ಕೆಲಸಗಳಿಗೆ ಅಡ್ಡಿಯನ್ನು ಪಡಿಸಿದರೆ ಪೊಲೀಸರು ಸೂಕ್ತ ಕ್ರಮವನ್ನು ಕೈಗೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.
ಪತ್ರದಲ್ಲಿ ಬರ್ನಾರ್ಡ್ ಷಾ ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ ಅದಕ್ಕೆ ಯಾಕೆ ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡು ನೋಡುತ್ತಾರೆ? ಯಾಕೆ ಕುಮಾರಸ್ವಾಮಿಯವರು ತನಗೇ ಹೇಳಿದ್ದು ಎಂದುಕೊಳ್ಳಬೇಕು? ಅವರನ್ನೇ ಪಾಯಿಂಟ್ ಔಟ್ ಮಾಡಿ ಹೇಳಲಿಲ್ಲವಲ್ಲಾ? ಎಂದಿದ್ದಾರೆ.