ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಬಳ್ಳಾರಿ ಜೈಲು ಸೇರಿರುವ ದರ್ಶನ್‌ಗೆ 27 ನೇ ತಾರೀಖಿನ ಸೋಮವಾರದಂದು ಬೇಲ್ ಸಿಗುವ ಭರವಸೆಯಲ್ಲಿರುವ ದರ್ಶನ್‌ಗೆ ಈಗ ನಿರಾಸೆಯಾಗಿದೆ. ಏಕೆಂದರೆ ಬೇಲ್ ಕೋರಿ ನೀಡಿರುವ ಅರ್ಜಿಯ ವಿಚಾರಣೆಯನ್ನು ಮುಂದೂಡಿರುವ ವಿಷಯ ತಿಳಿಯುತ್ತಿದ್ದಂತೆ ಬೇಸರವಾಗಿದ್ದುಐಟಿ ವಿಚಾರಣೆ ಬೇಲ್‌ಗೆ ಅಡ್ಡಿಯಾಗಬಹುದೆಂಬ ಆತಂಕದಲ್ಲಿದ್ದಾರೆ.
ಮತ್ತೊಮ್ಮೆ ದರ್ಶನ್ ಅವರಿಂದ ಪೂರ್ಣ ಮಾಹಿತಿಯನ್ನು ಪಡೆದುಕೊಂಡು ವಾದ ಮಂಡಿಸಲು ವಕೀಲರು ನಿರ್ಧಾರ ಮಾಡಿದ್ದು ಈ ಬಾರಿ ಎಚ್ಚರಿಕೆಯಿಂದ ವಾದ ಮಂಡಿಸಲು ಪೂರ್ಣ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.