ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ಗೆ ಚಿಕಿತ್ಸೆಯ ಕಾರಣಕ್ಕೆ ಹೈಕೋರ್ಟ್ ಮಧ್ಯಂತರ ಜಾಮೀನು ಮಾಡಿದೆ.ಎಲ್ಲಾ ಪ್ರಕ್ರಿಯೆಗಳು ಶೀಘ್ರವಾಗಿ ಮುಗಿದರೆ ಇಂದು ಸಂಜೆಯೇ ನಟ ದರ್ಶನ್ ಬಳ್ಳಾರಿ ಜೈಲಿನಿಂದ ಬಿಡುಗಡೆಯಾಗಬಹುದು ಎನ್ನಲಾಗಿದೆ.
ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟಿನಲ್ಲಿ ದರ್ಶನ್ ಬೇಲ್‌ಗೆ ಶ್ಯೂರಿಟಿ ಪ್ರಕ್ರಿಯೆ ಶುರುವಾಗಿದ್ದು, ನಟ ಧನ್ವೀರ್ ಮತ್ತು ಸಹೋದರ ದಿನಕರ್ ತೂಹುದೀಪ್ ನ್ಯಾಯಾಲಯಕ್ಕೆ ಶ್ಯೂರಿಟಿ ಸಲ್ಲಿಸಿದ್ದು ದರ್ಶನ್ ಪಾಸ್‌ಪೋರ್ಟ್ ಕೂಡಾ ನ್ಯಾಯಾಲಯಕ್ಕೆ ಹಸ್ತಾಂತರಿಸಲಾಯಿತು.
ಬೇಲ್ ಸಿಕ್ಕರೂ ದರ್ಶನ್ ಮೈಸೂರಿಗೆ ಪ್ರಯಾಣ ಮಾಡುವಂತಿಲ್ಲ. ಬೆಂಗಳೂರಿನಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. 6 ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರಾಗಿದ್ದು 6 ತಿಂಗಳುಗಳ ನಂತರ ಕೋರ್ಟ್‌ಗೆ ಹಾಜರಾಗಬೇಕು ಎಂದು ಸೂಚಿಸಿದೆ.
ಶ್ಯೂರಿಟಿ ಪ್ರಕ್ರಿಯೆಗಳೆಲ್ಲಾ ಮುಗಿದ ನಂತರ ಬಳ್ಳಾರಿ ಜೈಲಿಗಹೆ ಇ-ಮೇಲ್ ಸಂದೇಶದ ಮೂಲಕ ದರ್ಶನ್ ಬಿಡುಗಡೆಯ ಆದೇಶವನ್ನು ಕಳಿಸಲಾಗುತ್ತದೆ.ಇಂದು ಸಂಜೆ ದರ್ಶನ್ ಬಳ್ಳಾರಿ ಜೈಲಿನಿಂದ ರಿಲೀಸ್ ಆಗ್ತಾರೆ ಎನ್ನಲಾಗಿದೆ.