ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಕೋರ್ಟಿಗೆ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 4ಕ್ಕೆ ಮುಂದೂಡಿದ್ದು ಮುಂದಿನ ತಿಂಗಳವರೆಗೆ ದರ್ಶನ್‌ಗೇ ಜೈಲೇ ಫಿಕ್ಸ್ ಎಂದು ತಿಳಿದುಬಂದಿದೆ.
ಬೆಂಗಳೂರು ನಗರದ 57ನೇ ಸಿಟಿ ಸಿವಿಲ್ ಕೋರ್ಟ್ ಇಂದು ದರ್ಶನ್ ಜಾಮೀನಿನ ಅರ್ಜಿಯ ವಿಚಾರಣೆಯನ್ನು ನಡೆಸಿದ ಕೋರ್ಟ್ ಅಕ್ಟೋಬರ್ 4ಕ್ಕೆ ವಿಚಾರಣೆಯನ್ನು ಮುಂದೂಡಿರುವ ವಿಷಯ ತಿಳಿಯುತ್ತಿದ್ದಂತೆ ಜಾಮೀನಿನ ನಿರೀಕ್ಷಣೆಯಲ್ಲಿದ್ದ ದರ್ಶನ್‌ಗೆ ನಿರಾಸೆಯಾಗಿದ್ದು ಮುಂದಿನ ತಿಂಗಳಿನವರೆಗೆ ಜೈಲಲ್ಲೇ ಇರಬೇಕಾಗುತ್ತದೆಂದು ಬೇಸರಪಟ್ಟುಕೊಂಡಿದ್ದಾರೆ.
ನಟ ದರ್ಶನ್ ಪರ ವಕೀಲರಾದ ಸುನೀಲ್‌ರವರು ವಾದಮಂಡನೆಗೆ ಕಾಲಾವಕಾಶವನ್ನು ಕೇಳಿರುವ ಹಿನ್ನೆಲೆ ಕೋರ್ಟ್ ವಿಚಾರಣೆಯನ್ನು ಮುಂದೂಡಿದೆ ಎನ್ನಲಾಗಿದೆ.