ಭಾರತ ಮತ್ತು ನ್ಯೂಝಿಲೆಂಡ್ ನಡುವಿನ 3ನೇ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅಕ್ಷರಶಃ ಅಬ್ಬರಿಸಿದರು. ಕೇವಲ 20 ಎಸೆತಗಳಲ್ಲಿ ಅಜೇಯ 68 ರನ್ ಚಚ್ಚಿದ ಅವರು, ಭಾರತಕ್ಕೆ ಸುಲಭ ಜಯ ತಂದುಕೊಟ್ಟರು. ಈ ಪಂದ್ಯದ ನಂತರ ನ್ಯೂಝಿಲೆಂಡ್ ತಂಡದ ಡೆವೊನ್ ಕಾನ್ವೇ ಮತ್ತು ಜಾಕೋಬ್ ಡಫಿ ಅವರು ಅಭಿಷೇಕ್ ಬಳಿ ಬಂದು ಅವರ ಬ್ಯಾಟ್ ಅನ್ನು ಕುತೂಹಲದಿಂದ ಕಿತ್ತುಕೊಂಡು ಪರೀಕ್ಷಿಸಿದರು.

ಅಭಿಷೇಕ್ ಶರ್ಮಾ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ಭಾರತದ ಪರ ಟಿ20ಯಲ್ಲಿ 2ನೇ ಅತಿ ವೇಗದ ಫಿಫ್ಟಿ ದಾಖಲಿಸಿದರು. ಅವರ ಹೊಡೆತಗಳ ವೇಗ ಮತ್ತು ಶಕ್ತಿ ನೋಡಿ ಬೌಲರ್‌ಗಳು ಹೈರಾಣಾಗಿದ್ದರು.
ಈ ಇನಿಂಗ್ಸ್‌ನಲ್ಲಿ ಅಭಿಷೇಕ್ ಎದುರಿಸಿದ 20 ಎಸೆತಗಳಲ್ಲೂ ರನ್ ಗಳಿಸಿದ್ದಾರೆ. ಒಂದೇ ಒಂದು ಬಾಲ್ ವ್ಯರ್ಥ ಮಾಡದೆ ಆಡಿದ ಈ ರೀತಿ ಬ್ಯಾಟಿಂಗ್ ನೋಡಿ ಎದುರಾಳಿಗಳಿಗೆ ಆಶ್ಚರ್ಯವಾಗುವುದು ಸಹಜ.

ಈ ದೃಶ್ಯವನ್ನು ನೋಡಿದ ಅಭಿಮಾನಿಗಳು 2003ರ ವಿಶ್ವಕಪ್ ಫೈನಲ್‌ನಲ್ಲಿ ರಿಕಿ ಪಾಂಟಿಂಗ್ ಅವರ ಬ್ಯಾಟ್‌ನಲ್ಲಿ ‘ಸ್ಪ್ರಿಂಗ್’ ಇತ್ತು ಎಂಬ ಹಳೆಯ ವದಂತಿಯನ್ನು ನೆನಪಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ತಮಾಷೆ ಮಾಡುತ್ತಿದ್ದಾರೆ.ಇದು ಕೇವಲ ತಮಾಷೆಯ ಕ್ಷಣವಲ್ಲ, ಬದಲಿಗೆ ಅಭಿಷೇಕ್ ಶರ್ಮಾ ಅವರ ಅಸಾಧಾರಣ ಫಾರ್ಮ್ ಮತ್ತು ಅವರ ಬ್ಯಾಟಿಂಗ್ ಸಾಮರ್ಥ್ಯಕ್ಕೆ ಸಿಕ್ಕ ಅತಿ ದೊಡ್ಡ ಗೌರವ ಎಂದು ಹೇಳಲಾಗುತ್ತಿದೆ.
