ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಕೊಲೆಗಳ ಹಿನ್ನಲೆಯಲ್ಲಿ, ಶರಣ್ ಪಂಪ್ವೆಲ್ ಎಂಬ ಮನುವಾದಿ ಕಾರ್ಯಕರ್ತ ʼಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತಿಕಾರವಾಗಿ ಫಾಝಿಲ್ ಕೊಲೆʼ ಮಾಡಲಾಗಿದೆ ಎಂದು ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದ.
ಆತ ಹೇಳಿಕೆಯನ್ನು SDPIನ ಸ್ಟೇಟ್ ಜನರಲ್ ಸೆಕ್ರೆಟರಿ ಅಫ್ಸರ್ ಕೊಡ್ಲಿಪೇಟೆಯವರು ಖಂಡಿಸಿದ್ದು, ʼ
ಸುರತ್ಕಲ್ ಫಾಝಿಲ್ ಕೊಲೆಯನ್ನು “ಪ್ರವೀಣ್ ನೆಟ್ಟಾರು ಕೊಲೆಗೆ ಪ್ರತೀಕಾರ” ಎಂದು ಬಜರಂಗದಳದ ಶರಣ್ ಪಂಪ್ ವೆಲ್ ಸಮರ್ಥಿಸಿಕೊಂಡಿದ್ದು ತಕ್ಷಣ ಈತನನ್ನು ಬಂಧಿಸಿ ದ.ಕ ಜಿಲ್ಲೆಯಲ್ಲಿ ಇದುವರೆಗೆ ನಡೆದಿರುವ ಕೊಲೆಗಳಲ್ಲಿ ಇವನ ಪಾತ್ರವೇನು ಎಂಬ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಲು @DgpKarnataka ರವರಲ್ಲಿ ಆಗ್ರಹಿಸುತ್ತೇನೆʼ ಎಂದು ಟ್ವೀಟ್ ಮಾಡಿದ್ದಾರೆ.