ಆಹಾರದ ಗುಣಮಟ್ಟದ ಬಗ್ಗೆ ಪ್ರಶ್ನೆ ಎತ್ತಿದ 25 ಪರಿಶಿಷ್ಟ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಿಂದ ಹೊರಹಾಕಿರುವ ಘಟನೆ ನಡೆದಿದ್ದು ಅದರ ವಿರುದ್ದ ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.
‘ಹಾಸ್ಟೆಲ್‌ನಲ್ಲಿರುವ ಮಕ್ಕಳು ಊಟದಲ್ಲಿನ ಕಳಪೆ ಗುಣಮಟ್ಟವನ್ನು ಪ್ರಶ್ನೆ ಮಾಡಿದ್ದಕ್ಕೆ ಹೊರಹಾಕಿರುವುದು ಖಂಡನೀಯ. ಯಾಕೆ ಬಿಜೆಪಿ ಪಕ್ಷ ಆಡಳಿತಲ್ಲಿರುವಾಗ ಕನಿಷ್ಟ ಕಳಪೆ ಆಹಾರದ ಬಗ್ಗೆಯೂ ಕೇಳಬಾರದೇ’ ಎಂದು ಟ್ವೀಟ್‌ ಮಾಡಿದೆ.

ʼಮಾನ್ಯ ಮುಖ್ಯಮಂತ್ರಿಗಳೇ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಇದ್ದಿದ್ದೇ ಆದರೆ, ಜಿಲ್ಲಾಧಿಕಾರಿ ಹಾಗೂ ಹಾಸ್ಟೆಲ್‌ ವಾರ್ಡನ್ ವಿರುದ್ದ ಕ್ರಮ ಜರುಗಿಸಿ, ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿ.ʼ ಎಂದು ಟ್ವೀಟ್‌ ಮಾಡುವುದರ ಜೊತೆಗೆ ಬಿಜೆಪಿಯು ದಲಿತರನ್ನು ಕೀಳಾಗಿ ನೋಡುವುದು ಪದೇ ಪದೇ ಕಾಣಿಸುತ್ತಿದೆ. ಅವರ ಉದ್ದಾರಕ್ಕಾಗಿ ಅನುದಾನವನ್ನ ಬೇರೆಡೆ ಸಾಗಿಸಿ, ದುರ್ಬಲ ಸಮುದಾಯಗಳ ವಸತಿ ಕನಸಿಗೆ ಕೊಳ್ಳಿಯನ್ನು ಇಟ್ಟಿದ್ದಾರೆ ಎಂದು ಟ್ವೀಟ್‌ ಮಾಡಿದೆ.

Leave a Reply

Your email address will not be published. Required fields are marked *