ಬೆಳಗಾವಿ: ವಿಧಾನಸಭೆ ಚುನಾವಣೆ ಹತ್ತಿರಕ್ಕೆ ಬರುತ್ತಿದ್ದಂತೆ ತಮ್ಮ ಪಕ್ಷದ ಉಳಿವಿಗಾಗಿ ನಾಯಕರುಗಳು ಇನ್ನಿಲ್ಲದ ಕಸರತ್ತುಗಳನ್ನು ಮಾಡುವುದಲ್ಲದೆ, `ನಾವೇ ಗೆಲ್ಲುತ್ತೇವೆ; ನಾವು ಮಾತ್ರ ಗೆಲ್ಲುತ್ತೇವೆ’ ಎಂದು ತಮಗೆ ತಾವೇ ಬೋರ್ಡ್ಗಳು ನೇತುಹಾಕಿಕೊಂಡು ತಮ್ಮ ಭರಾಟೆಯನ್ನು ಶುರುಮಾಡಿದ್ದಾರೆ.
ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಕಾಂಗ್ರೆಸ್ ಯಾವ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ, ಸುಮ್ಮನೆ ಕೈ ನಾಯಕರು ತಮ್ಮ ಅಬ್ಬರವನ್ನು ತೋರಿಸುತ್ತಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಕ್ಕೆ ಸಾಧ್ಯವಿಲ್ಲ, ನಮ್ಮೆಲ್ಲರ ಶಕ್ತಿಯನ್ನು ಒಟ್ಟುಗೂಡಿಸಿ ಬಿಜೆಪಿ ಸರ್ಕಾರವನ್ನ ಮತ್ತೆ ಅಧಿಕಾರಕ್ಕೆ ತರುತ್ತೇನೆ ಎಂದಿದ್ದಾರೆ.
ಬಿಜೆಪಿಯನ್ನು ನಾನು ಬಿಡುತ್ತೇನೆಂದು ಸತ್ಯಕ್ಕೆ ದೂರವಾದ ಸುದ್ದಿಗಳನ್ನು ಹಬ್ಬಿಸುವವರಿಗೆ ಉತ್ತರ ಕೊಟ್ಟ ಅವರು ನಾನು ಬಿಜೆಪಿ ಬಿಡುವುದಿಲ್ಲ ಅಲ್ಲಿಯೇ ಇದ್ದು ಇತಿಹಾಸವನ್ನ ಸೃಷ್ಟಿಮಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ.