18 ವರ್ಷ ವಯಸ್ಸಿನ ಮಕ್ಕಳಿಗೆ ಮದ್ಯಪಾನ ಮಾಡಲು ಅನುಮತಿ ನೀಡಿರುವ ಚಿಂತನೆಯ ಕುರಿತು ಯು.ಟಿ ಖಾದರ್ ತೀವ್ರ ಆಕ್ರೋಶವನ್ನು ಬಿಜೆಪಿ ಪಕ್ಷದ ವಿರುದ್ದ ವ್ಯಕ್ತಪಡಿಸಿದ್ದಾರೆ.
ಇಂದು ನಗರದಲ್ಲಿ ಮಾತನಾಡಿದ ಅವರು ಪದವಿ ಶಿಕ್ಷಣ ಮುಗಿಸಿ ಕೆಲಸವಿಲ್ಲದೆ ಖಾಲಿ ಕುಳಿತಿರುವ ಮಕ್ಕಳಿಗೆ ಉದ್ಯೋಗವನ್ನು ಕಲ್ಪಿಸಲು ಆಗದೇ ಇರುವವರು ಮಕ್ಕಳ ಭವಿಷ್ಯ ಹಾಳು ಮಾಡುವಂತಹ ಚಿಂತನೆಗಳನ್ನು ಮಾಡುತ್ತಿದೆ ಈ ಬಿಜೆಪಿ ಸರ್ಕಾರ. ಈ ರೀತಿಯ ಚಿಂತನೆಗಳಿಂದ ಮಕ್ಕಳ ಭವಿಷ್ಯದ ಮೇಲೆ ಎಂತಹ ಕೆಟ್ಟ ಪರಿಣಾಮ ಬೀರುತ್ತದೆ ಎಂಬ ಅಂದಾಜಿಲ್ಲದೆ ಈ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ.
ಕೇವಲ ದುಡ್ಡು ಮಾಡುವ ಕಾರ್ಯಕ್ಕಾಗಿ ಯುವ ಜನತೆಗೆ ದುಷ್ಚಟಗಳಿಗೆ ದಾಸರಾಗುವಂತೆ ಪ್ರೇರೆಪಿಸುವ ಇಂತಹ ಹೇಯ ಕಾರ್ಯಗಳಿಂದ ಕ್ರಿಮಿನಲ್ ಚಟುವಟಿಕೆಗಳು ಹೆಚ್ಚಾಗುತ್ತವೆ ಎಂಬ ಅಂದಾಜಿಲ್ಲದೆ ಈ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಅಪ್ರಾಪ್ತ ಮಕ್ಕಳ ಭವಿಷ್ಯ ಹಾಳಾಗುವುದರಿಂದ ವರುವ ಆದಾಯ ನಮಗೆ ಬೇಕಾಗಿಲ್ಲ ಇದರ ಬದಲು ಮದ್ಯಪಾನವನ್ನು ಸಂಪೂರ್ಣವಾಗಿ ನಿಷೇಧ ಮಾಡಲಿ ಎಂದು ಹೇಳಿದ್ದಾರೆ.