ಬೆಂಗಳೂರು: ಮೂರು ಕ್ಷೇತ್ರದ ಜನತೆ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತನೀಡಿ ಆಶೀರ್ವದಿಸಿ ಗೆಲುವನ್ನು ನೀಡಿದ ಶಿಗ್ಗಾವಿ ಸಂಡೂರು ಮತ್ತು ಚನ್ನಪಟ್ಟಣದ ಮತದಾರ ಪ್ರಭುಗಳಿಗೆ ಸಿಎಂ ಸಿದ್ದರಾಮಯ್ಯ ನನ್ನ ಕೋಟಿ ಕೋಟಿ ಪ್ರೀತಿಪೂರ್ವಕ ಧನ್ಯವಾದಗಳನ್ನು ತಿಳಿಸುವ ಪೋಸ್ಟೊಂದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮೈರು ಕ್ಷೇತ್ರಗಳಲ್ಲಿ ಗೆಲುವನ್ನು ಪಡೆದು ವಿದಾನಸಭೆಗೆ ಪ್ರವೇಶವನ್ನು ಪಡೆದಿರುವ ಕಾಂಗ್ರೆಸ್ ಅಭ್ಯರ್ಥಿಗಳಾದ ಅನ್ನಪೂರ್ಣ ತುಕಾರಾಂ, ಯಾಸೀರ್ ಅಹ್ಮದ್ ಖಾನ್ ಪಠಾಣ್ ಮತ್ತು ಸಿಪಿ ಯೋಗೇಶ್ವರ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ.ವಿಪಕ್ಷಗಳು ನಮ್ಮ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ, ಅಪಪ್ರಚಾರ ಮಾಡಿಕೊಂಡು ಬಂದಿದ್ದರೂ ನಮಗೆ ಗೆಲುವು ಸಿಕ್ಕಿದೆ.ಈ ಗೆಲುವಿನ ಹಿಂದೆ ಪಕ್ದ ಕಾರ್ಯಕರ್ತರ ಮತ್ತು ಮುಖಂಡರ ಶ್ರಮವಿದೆಯೆಂದು ಈ ಸಮಯದಲ್ಲಿ ನೆನಪು ಮಅಡಿಕೊಳ್ಳುತ್ತೇನೆ.ನಮ್ಮ ಸರ್ಕಾರದ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ರಾಜ್ಯದ ಜನತೆ.ಜನರಿಗಾಗಿ ದುಡಿಯುವ ಕೈಗಳಿಗೆ ಬಲ ಸಿಕ್ಕಂತಾಗಿದೆ.ತಮ್ಮೆಲ್ಲರಿಗೂ ಮತ್ತೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.