ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷದ ವರ್ಚಸ್ಸು ಕಡಿಮೆಯಾಗಿಲ್ಲ. ನಾವು ಮಾಡುವ ಅಭಿವೃದ್ದಿ ಕಾರ್ಯಗಳನ್ನು ನೋಡಿ ಜನ ನಮ್ಮ ಕೈ ಹಿಡಿದಿದ್ದಾರೆ. ನಾವು ನೀಡಿದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾದ ಮಹಿಳೆಯರು ನಮಗೆ ಮೋಸ ಮಾಡೋಕೆ ಹೇಗೆ ಸಾದ್ಯವೆಂದು ಪ್ರದೀಪ್‌ ಈಶ್ವರ್‌ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ ಪಕ್ಷದ ಗೆಲುವಿನ ಕುರಿತು ಮಾತನಾಡಿದ ಪ್ರದೀಪ್‌ ಈಶ್ವರ್‌, ಇದು ಸಿಎಂ ಸಿದ್ದರಾಮಯ್ಯ ಮತ್ತು ಡಿಕೆಶಿವಕುಮಾರ್‌ ಅವರ ಗೆಲುವು.ನಮ್ಮ ಸಿಎಂ ಸಾಹೇಬ್ರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದ್ದರು. ಡಿಕೆಶಿವಕುಮಾರ್‌ರವರನ್ನು ಟಾರ್ಗೆಟ್‌ ಮಾಡಿದ್ದರು.ಅವೆಲ್ಲದಕ್ಕೂ ರಾಜ್ಯದ ಜನತೆ ಅಹಿಂದ ವರ್ಗ ಉತ್ತರವನ್ನು ನೀಡಿದೆ ಎಂದಿದ್ದಾರೆ.

ಈ ಚುನಾವಣೆಯ ಮೂಲಕ ತಿಳಿಯುವುದೆನೆಂದರೆ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆಶಿವಕುಮಾರ್‌ ಅಹಿಂದ ವರ್ಗಗಳ, ಒಕ್ಕಲಿಗರ ಸಮುದಾಯಕ ನಾಯಕರು ಎಂದು ಹಾಡಿ ಹೊಗಳಿದ್ದಾರೆ. ವಿಪಕ್ಷಗಳ ಮಾಡಿದ ಸಮೀಕ್ಷೆಗಳೆಲ್ಲಾ ಮಕಾಡೆ ಮಲಗಿಕೊಂಡಿದ್ದು, ಕಾಂಗ್ರೆಸ್‌ ಗೆಲುವನ್ನು ಮುಡಿಗೇರಿಸಿಕೊಂಡಿದೆ.

ಡಿಕೆ ಶಿವಕುಮಾರ್‌ ಮತ್ತು ಸಿಪಿ ಯೋಗೇಶ್ವರ್‌ ಜೊತೆಗೆ 10 ದಿನಗಳ ಕಾಲ ಪ್ರಚಾರ ಮಾಡಬೇಕಾದ್ರೆನೆ ನನಗೆ ತಿಳಿದಿತ್ತು ಗೆಲುವು ಖಚಿತ ಎಂದು ಹರ್ಷವ್ಯಕ್ತಪಡಿಸಿದ್ದಾರೆ.

ಇನ್ನೂ ನಾವು ನೀಡಿದ 2000 ಹಣವನ್ನು ಪಡೆದು ನಮಗೆ ಮೋಸ ಮಾಡಲು ಸಾದ್ಯವಿಲ್ಲ. ಬಸ್‌ಗಳಲ್ಲಿ ಫ್ರೀಯಾಗಿ ಪ್ರಯಾಣವನ್ನು ಮಾಡಿ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ದರ್ಶನವನ್ನು ಪಡೆದುಕೊಂಡಿದ್ದಾರೆ.ದೇವಾನು ದೇವತೆಗಳ ದರ್ಶನ ಪಡೆದ ಮಹಿಳೆಯರು ನಮಗೆ ಮೋಸ ಮಾಡಲು ಸಾದ್ಯವಿಲ್ಲ ಎಂದು ಪಕ್ಷದ ಗೆಲುವಿಗೆ ಕಾರಣವನ್ನು ತೆರೆಟ್ಟಿದ್ದಾರೆ.

Leave a Reply

Your email address will not be published. Required fields are marked *