ಬೆಂಗಳೂರು: ಮೂರು ಕ್ಷೇತ್ರಗಳ ಅಸೆಂಬ್ಲಿ ಬೈಎಲೆಕ್ಷನ್‌ನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ.
ಮೂರು ಕ್ಷೇತ್ರಗಳಲ್ಲಿ ಗೆಲುವು ಪಡೆದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಆರ್. ಅಶೋಕ್, ಇದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿವಕುಮಾರ್‌ಗೆ ಸಂಧ ಗೆಲುವಲ್ಲ. ಬದಲಾಗಿ ಇದು ಕಾಂಚಾಣದ ಗೆಲುವಾಗಿದೆ. ಮತದಾರರ ತೀರ್ಪಿಗೆ ತಲೆಬಾಗುತ್ತೇವೆ.ನಿಕಿಲ್ ಕುಮಾರಸ್ವಾಮಿಗೆ ಅರ್ಜುನನ ಪಾತ್ರವನ್ನು ಕೊಡುತ್ತಾರೆ ಎಂದುಕೊಂಡಿದ್ದೇವೆ ಆದರೆ ಈ ಸಲವೂ ಜನ ಮತ್ತೆ ಅಭಿಮನ್ಯು ಪಾತ್ರವನ್ನೇ ನೀಡಿದ್ದಾರೆ.
ಎರಡೆರಡು ಬಾರೀ ಸೋತ ನಿಕಿಲ್‌ಗೆ ಈ ಬಾರೀ ಗೆಲುವು ಮುಡಿಗೇರುತ್ತದೆ ಎಂದುಕೊಂಡಿದ್ದೇವು. ಆದರೆ ಕಾಂಗ್ರೆಸ್ ನಾಯಕರು ಹಣದ ಮಳೆಯನ್ನು ಸುರಿಸಿ ತಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡಿದ್ದಾರೆ. ಇದು ಪಕ್ಷದ ಗೆಲುವಲ್ಲ, ಕಾಂಚಾಣದ ಗೆಲುವು ಎಂದು ವ್ಯಂಗ್ಯವಾಡಿದ್ದಾರೆ.