ಮೂರು ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್‌ ಗೆಲುವನ್ನು ಸಾಧಿಸಿದೆ.ಬಿಜೆಪಿ-ಜೆಡಿಎಸ್‌ ಪಕ್ಷಗಳಿಗೆ ಅಘಾತವಾಗಿದೆ. ಮಾಜಿ ಸಿಎಂ ಮಕ್ಕಳಿಗೆ ಮುಖಭಂಗವಾಗಿದೆ.ಜನರು ನಾವು ಮಾಡಿರುವ ಕೆಲಸಗಳನ್ನು ನೋಡಿ ನಮ್ಮ ಕೈ ಹಿಡಿದಿದ್ದಾರೆ ಎಂದು ಗೆಲುವಿನ ನಂತರ ನಡೆದ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ್ದಾರೆ.

ವಿಪಕ್ಷಗಳು ಟೀಕೆಗಳನ್ನು ಮಾಡುತ್ತಾ ಬಂದರು. ಆದರೆ ಟೀಕೆಗಳು ಸಾಯುತ್ತವೆ ನಾನು ಜನರಿಗೆ ಮಾಡಿರುವ ಕಾರ್ಯಗಳು ಉಳಿಯುತ್ತವೆ. ಚುನಾವಣೆಯನ್ನು ಜನರ ಭಾವನೆಗಳ ಜೊತೆ ಮಾಡಬಾರದು. ಜನರ ಬದುಕಿನ ಮೇಲೆ ಮಾಡಿ ಎಂದು ಸಲಹೆಯನ್ನು ನೀಡಿದ್ದಾರೆ. ನಾವು ನೀಡಿದ ಗ್ಯಾರಂಟಿಗಳನ್ನು ಅಲ್ಲಗೆಳೆಯುತ್ತಿದ್ದರು ಆದರೆ ನಾವು ಗ್ಯಾರಂಟಿಗಳನ್ನು ಮುಂದುವರೆಸುತ್ತಿದ್ದೇವೆ.ಜನತೆಯ ಮನೆಗೆ ದೀಪವಾಗಿ, ಅವರ ಬದುಕಿಗಾಗಿ, ಅವರ ಪ್ರಯಾಣಕ್ಕಾಗಿ ನಾವು ವರ್ಷಕ್ಕೆ 55 ಕೋಟಿ ನೀಡಿ ಗ್ಯಾರಂಟಿಗಳನ್ನು ನಡೆಸುತ್ತಿದ್ದೇವೆ.ಜನರು ತಮ್ಮ ಗ್ಯಾರಂಟಿಗಳಿಂದ ನಮ್ಮನ್ನು ಉಳಿಸಿಕೊಂಡಿದ್ದಾರೆ.

ಇದು ನಮ್ಮ ಗೆಲುವು. ನಮ್ಮನ್ನು ಸುಳ್ಳು ರಾಜಕಾರನ ಮಾಡುತ್ತಿದ್ದಾರೆ. ಸುಳ್ಳು ನಮ್ಮ ಮನೆಯ ದೇವರು ಎಂದು ಚುನಾವನಾ ಕಣಕ್ಕೆ ಇಳಿದರು ಆದರೇನಾಯಿತು? ಮಾಜಿ ಸಿಎಂ ಮಕ್ಕಳ ಸೋಲಿನ ಅಂತರವೆಷ್ಟು ಮತ್ತು ಕಾಂಗ್ರೆಸ್‌ ಪಕ್ಷಕ್ಕೆ ಸಿಕ್ಕಿರುವ ಮತಗಳೆಷ್ಟು ಎಂದು ಲೆಕ್ಕಮಾಡಿ ಎಂದಿದ್ದಾರೆ.

Leave a Reply

Your email address will not be published. Required fields are marked *