ಮೈಸೂರು: ಸಿಎಂ ಸಿದ್ದರಾಮಯ್ಯನವರು ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಗಲಾಟೆ, ಗದ್ದಲ ಮಾಡುತ್ತಿದ್ದ ಕಾರ್ಯಕರ್ತರ ಮೇಲೆ ಸಿಎಂ ಸಿದ್ದರಾಮಯ್ಯ ಸಿಡುಕಿದ್ದಾರೆ.
ಇಂದು ಬೆಳಗ್ಗೆ ತಮ್ಮ ಸ್ವಗೃಹದಲ್ಲಿ ಮಾಧ್ಯಮಮಿತ್ರರೊಂದಿಗೆ ಮಾತನಾಡುವ ವೇಳೆ ಸಿಎಂ ಸಿದ್ದರಾಮಯ್ಯನವರ ಅಕ್ಕಪಕ್ಕದಲ್ಲಿ ನಿಂತಿದ್ದ ಕಾರ್ಯಕರ್ತರು ಗದ್ದಲ ಗಲಾಟೆಗಳು ನಡೆದು ಪೊಲೀಸರ ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯುವ ಸಮಯದಲ್ಲಿ ಕೋಪಗೊಂಡ ಸಿದ್ದರಾಮಯ್ಯ ಕಾರ್ಯಕರ್ತರನ್ನು ಗದರಿ ನಾಲಗೆಯನ್ನು ಕಚ್ಚಿ ಹೊಡೆಯಲು ಕೈ ಎತ್ತಿರುವುದು ಕಾಣಬಹುದಾಗಿದೆ.
ಬಂಡೀಪುರದಲ್ಲಿ ರಾತ್ರಿಯ ವೇಳೆ ಸಂಚಾರವನ್ನು ನಿಷೇಧವನ್ನು ತೆಗೆಯುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ ಈ ವಿಚಾರದ ಪ್ರಸ್ಥಾವನೆ ಸರ್ಕಾರದ ಮುಂದಿಲ್ಲ.ಡಿಕೆ ಶಿವಕುಮಾರ್ ಯಾಕೆ ಯಾವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ ಎಂಬುದನ್ನು ಅವರನ್ನೇ ಕೇಳಿ ತಿಳಿದುಕೊಳ್ಳಿ ಎಂದು ಖಡಕ್‌ಆಗಿ ಹೇಳಿದ್ದಾರೆ.