ಮೈಸೂರು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರನ್ನು ಕರಿಯಣ್ಣ ಎಂದಿದ್ದಕ್ಕೆ ಜೆಡಿಎಸ್ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿ, ಜಮೀರ್ ವಿರುದ್ದ ಮುಗಿಬಿದ್ದಿದ್ದಾರೆ. ಅದಲ್ಲದೆ ಜನಾಂಗೀಯ ನಿಂದನೆಯ ಹೇಳಿಕೆಯನ್ನು ನೀಡಿರುವ ಜಮೀರ್ ಅಹ್ಮದ್ ವಿರುದ್ದ ಕೆಂಡಕಾರಿದ್ದರು.ಈ ವಿಚಾರ ತಿಳಿದ ತಕ್ಷಣ ಎಚ್ಚೆತ್ತುಕೊಂಡ ಅವರು ನಾನು ಮೊದಲಿನಿಂದಲೂ ಕುಮಾರಣ್ಣನನ್ನು ಕರಿಯಣ್ಣ ಅಂತಾನೇ ಕರೆಯುತ್ತಿದ್ದೆ ಇದರಿಂದ ನಿಮಗೆ ನೋವಾಗಿದ್ದರೆ ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಕ್ಷಮೆಯನ್ನು ಯಾಚಿಸಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಮೊದಲಿನಿಂದಲೂ ಕರಿಯಣ್ಣ ಎಂದು ಕರೆಯೋದು.ಅವರು ನನ್ನನ್ನು ಕುಳ್ಳ ಎಂದು ಕರೆಯುತ್ತಾರೆ. ಅಷ್ಟು ಸಲಗೆಯಿದೆ ನಮ್ಮಿಬ್ಬರ ನಡುವೆ ಆ ಕಾರಣದಿಂದಲೇ ಅವರನ್ನು ಕರೆದಿದ್ದು ಎಂದು ಸ್ಪಷ್ಟಪಡಿಸಿದ್ದಾರೆ.
ನಾನು ಕುಮಾರರಣ್ಣನನು ಕರಿಯಣ್ಣ ಎಂದಿರುವ ಮಾತು ಜೆಡಿಎಸ್ ಮುಖಂಡರಿಗೆ ನೋವಾಗಿದೆ ಎಂದು ತಿಳಿಯಿತು.ನನ್ನ ಹೇಳಿಕೆಯಿಂದ ನೋವಾಗಿದ್ದರೆ ದಯವಿಟ್ಟು ನನ್ನನ್ನುಕ್ಷಮಿಸಿ ಎಂದು ಕ್ಷಮೆಯನ್ನು ಕೋರಿದ್ದಾರೆ.