ದಾವಣಗೆರೆ: ಸಿಎಂ ಸಿದ್ದರಾಮಯ್ಯನವರದ್ದು ಟಿಪ್ಪು ಸಂಸ್ಕೃತಿ, ಮುಸಲ್ಮಾನರು ಏನು ಕೇಳಿದ್ರೂ ಕೊಟ್ಟುಬಿಡ್ತಾನೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಸಿಎಂ ಸಿದ್ದರಾಮಯ್ಯನವರ ವಿರುದ್ದ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆಯಲ್ಲಿಂದು ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಮುಸಲ್ಮಾನರು ನಾಲ್ಕು ಪರ್ಸೆಂಟ್ ಕೇಳಿದ್ರೂ ಕೊಡ್ತಾನೆ, ಎಂಟು ಕೇಳಿದ್ರೂ ಕೊಡ್ತಾನೆ . ಉತ್ತರ ಕರ್ನಾಟಕದಲ್ಲಿ ಅವನ್ಯಾರೊ ಮಾಜಿ ಸಚಿವನು ಹೇಳಿದ್ದಾನಲ್ಲ ಸಿಎಂ ಆಗಿದ್ದಾಗಲೇ ಎಲ್ಲವನ್ನೂ ಬಾಚಿ ಹಾಕಿಕೊಳ್ಳಿ ಎಂದು ಹಾಗೆಯೇ ಈ ಸಿದ್ದರಾಮಯ್ಯನು ಕೂಡಾ ಮುಸ್ಲಿಮರು ನಾಲ್ಕು ಕೇಳಿದರೆ ಎಂಟು ಕೊಡ್ತಾನೆ ಎಂದು ಏಕವಚನದಲ್ಲಿಯೇ ವಾಗ್ದಾಳಿಯನ್ನು ಮಾಡಿದ್ದಾರೆ.