ಹಾವೇರಿ: 3 ಕ್ಷೇತ್ರಗಳ ಬೈಎಲೆಕ್ಷನ್ ಚುನಾವಣೆಗೆ ಒಂದೇ ಒಂದು ದಿನ ಬಾಕಿ ಇದೆ ಆದ್ರೆ ಕಾಂಗ್ರೆಸ್ ಮಾಜಿ ಶಾಸಕರೊಬ್ಬರು ಸಂವಿಧಾನ ಶಿಲ್ಪಿ ಡಾ.ಬಿ.ಆಂಬೇಡ್ಕರ್‌ರವರ ಕುರಿತು ವಿವಾದಾತ್ಮಕ ಹೇಳಿಕೆಯನ್ನು ನೀಡಿರುವುದು ರಾಜಕೀಯವಲಯದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.
ಡಾ.ಬಿ.ಆಂಬೇಡ್ಕರ್ ಭೌದ್ದ ಧರ್ಮಕ್ಕೆ ಸೇರುವ ಮೊದಲು ಇಸ್ಲಾಂಧರ್ಮಕ್ಕೆ ಸೇರಲು ಸಿದ್ಧತೆಯನ್ನು ಮಾಡಿಕೊಂಡಿದ್ದರ ಎನ್ನುವ ವಿವಾದಾತ್ಮಕ ಹೇಳಿಕೆಯನ್ನು ಕಾಂಗ್ರೆಸ್ ಮುಖಂಡರಾದ ಅಜಿಂ ಪಾದ್ರಿ ನೀಡಿದ್ದಾರೆ.
ಶಿಗ್ಗಾವಿ ಕ್ಷೇತ್ರದ ಹನುಮಂತ ಪಾಟೀಲ್ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಆದಿಜಾಂಬವ ಜಾಗೃತಿ ಸಮಾವೇಷದಲ್ಲಿ ಮಾತನಾಡುವ ವೇಳೆ ಈ ರೀತಿಯ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ ಎನ್ನಲಾಗಿದೆ.
ಡಾ.ಬಿ.ಆಂಬೇಡ್ಕರವರು ಇಸ್ಲಾಂ ಧರ್ಮಕ್ಕೆ ಸೇರಲು ಸಿದ್ಧತೆ ಮಾಡಿಕೊಂಡಿದ್ದರು.ಆದರೆ ಕೊನೆ ಘಳಿಗೆಯಲ್ಲಿಬೌದ್ಧ ಧರ್ಮಕ್ಕೆ ಸೇರಿಕೊಂಡರು ಎಂಬುದನ್ನು ನಾನು ಓದಿದ್ದೆ ಎಂದು ಹೇಳಿದ್ದಾರೆ.
ಡಾ.ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸದೆ ಇದ್ದರೆ ದಲಿತರೆಲ್ಲರೂ ಮುಸ್ಲಿಂ ಆಗುತ್ತಿದ್ದರು. ಆಗ ಆರ್.ಬಿ.ತಿಮ್ಮಾಪುರವರು ಹೋಗಿ ರಹೀಮ್ ಖಾನ್ ಆಗ್ತಿದ್ದರು, ಡಾ.ಜಿ.ಪರಮೇಶ್ವರ್ ಹೋಗಿ ಪೀರ್ ಸಾಹೇಬ್ ಆಗ್ತಿದ್ದರು, ಎಲ್.ಹನುಮಂತಪ್ಪ ಹೋಗಿ ಹಸನ್‌ಸಾಬ್ ಆಗ್ತಿದ್ದರು.ಮಂಜುನಾಥ್ ತಿಮ್ಮಾಪುರ ಹೋಗಿ ಬಾಬೂ ಸಾಬ್ ಆಗ್ತಿದ್ರು, ಈಗಲೂ ದಲಿತ ಕೇರಿಗಳ ಪಕ್ಕದಲ್ಲಿ ದರ್ಗಾ ಇದ್ದೇ ಇರುತ್ತದೆ.ದಲಿತರು-ಮುಸ್ಲೀಮರ ಬಾಂಧವ್ಯ ಇದೆ ಎಂದಿದ್ದಾರೆ.