ಹುಬ್ಬಳ್ಳಿ: ರಾಜ್ಯದ ಇತಿಹಾಸದಲ್ಲೇ ಪ್ರಪ್ರಥಮ ಬಾರಿ ಮುಖ್ಯಮಂತ್ರಿಗಳು ಆರೋಪಿಯಾಗಿ ಲೋಕಾಯುಕ್ತ ವಿಚಾರಣೆಯನ್ನು ಎದುರಿಸಲು ಹಾಜರಾಗಿರುವುದು ಸಿಎಂ ಘನತೆಯನ್ನು ಕುಗ್ಗಿಸಿದೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಿಎಂ ಸಿದ್ದರಾಮಯ್ಯನವರನ್ನು ಟೀಕೆ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಅವರು, ಮುಡಾ ಪ್ರಕರಣ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಲೋಕಾಯುಕ್ತ ವಿಚಾರಣೆಯನ್ನು ಎದುರಿಸಿರುವ ಕಾರಣ ಕರ್ನಾಟಕದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿ ಒಬ್ಬರು ಸಿಎಂ ಲೋಕಾಯುಕ್ತ ವಿಚಾಣೆಯನ್ನು ಎದುರಿಸಿರುವುದು. ಇದರಿಂದ ಸಿಎಂ ಸ್ಥಾನಕ್ಕೆ ಚ್ಯುತಿ ತಂದಂತಿದೆ ಮತ್ತು ಸಿಎಂ ಗೌರವವನ್ನು ಕಡಿಮೆ ಮಾಡಿದೆ. ಈ ರೀತಿಯ ಹಲವಾರು ಪ್ರಕರಣಗಳಿದ್ದು ಸರ್ಕಾರಿ ನೌಕರರರು ರಾಜಕೀಯ ನಾಯಕರ ಒತ್ತಡದಿಂದ ಕುಗ್ಗುತ್ತಿದ್ದಾರೆ.ಎಲ್ಲಾ ಕೆಲಸಗಳಲ್ಲೂ ಕಾನೂನುಬಾಹಿರವಾಗಿರುವಂತೆ ಒತ್ತಾಯ ಮಾಡುತ್ತಿರುವ ಹಿನ್ನೆಲೆ ಒತ್ತಡ ಹೆಚ್ಚಾಗಿದೆ.ಶಿಗ್ಗಾಂವಿ ಮತಕ್ಷೇತ್ರದಲ್ಲಿ ಕೂಡಾ ಇದೇ ಪರಿಸ್ಥಿತಿಯಾಗಿದೆ.ಶಾಲೆಯಶಿಕ್ಷಕರಿಗೆ ಮಂಥ್ಲಿ ಫಿಕ್ಸ್ ಮಾಡಲು ತಯಾರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.