ಹುಬ್ಬಳ್ಳಿ:ಉಪಚುನಾವಣೆಯ ಸಮಯದಲ್ಲಿ ದುಡ್ಡು ಕೆಲಸ ಮಾಡುವುದಿಲ್ಲ. ಮತದಾರರು ಬಿಜೆಪಿಯಿಂದ ಹಣವನ್ನು ಪಡೆದು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುತ್ತಾರೆ. ಬೈಎಲೆಕ್ಷನ್ ಮುಗಿಯುವವರೆಗೆ ಬಿಜೆಪಿಗರು ಪ್ರತಿಭಟನೆಗಳನ್ನು ಮಾಡಿ ಚುನಾವಣೆ ಮುಗಿದ ನಂತರ ಮನೆ ಕಡೆ ಹೋಗ್ತಾರೆ ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಒಳಜಗಳಗಳು ಎಷ್ಟೇ ಇದ್ದರೂ ಚುನಾವಣೆ ಎಂದು ಬಂದರೆ ಎಲ್ಲರೂ ಒಟ್ಟಾಗಿ ನಿಂತು ಪಕ್ಷವನ್ನುಗೆಲ್ಲಿಸುತ್ತೇವೆ ನಮ್ಮ ಪಕ್ಷದಲ್ಲಿ ಸಾಮರಸ್ಯವಿದೆ ಆದರೆ ಅದು ಬಿಜೆಪಿ ಪಕ್ಷದಲ್ಲಿಲ್ಲ ಈ ಬಾರೀ ಕಾಂಗ್ರೆಸ್ ಗೆಲುವ ಕಾಣುವುದಲ್ಲಿ 2 ಮಾತಿಲ್ಲ. ವಕ್ಫ್ ವಿಚಾರದಲ್ಲಿ ಕಾಂಗ್ರೆಸ್ ತಪ್ಪು ಮಾಡಿಲ್ಲ.ಬಿಜೆಪಿಯವರು ಶುರಮಾಡಿದ್ದನ್ನು ಕಾಂಗ್ರೆಸ್ಸಿನವರು ಮುಂದುವರೆಸುತ್ತಿದ್ದವೆ.ಕಾಂಗ್ರೆಸ್ ಎಂದೂ ರೈತರ ವಿರುದ್ದ ನಿಂತಿಲ್ಲ ನಿಲ್ಲೋದಿಲ್ಲ.ದೇವರಾಜ್ ಅರಸ್ ಇದ್ದಾಗ ರಾಜ್ಯದ ಜನತೆಗೆ ಕಾಂಗ್ರೆಸ್ 22 ಲಕ್ಷ ಎಕರೆ ಕೊಡುತ್ತಿರಲಿಲ್ಲ.ನೀವು ಹೇಗೆ ಕಾಂಗ್ರೆಸ್ ರೈತ ವಿರೋದಿ ಎಂದು ಹೇಳುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ವಿಜಪುರದಲ್ಲಿ ರೈತರ ಪ್ರತಿಭಟನೆಗೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲೋ ಒಂದೆರಡು ಕಡೆ ಪ್ರಾಂಬ್ಲಮ್ ಆದ್ರೆ ಧರಣಿ ಕೂರ್ತಾರೆ.ಅವರಿಗೆ ಪ್ರತಿಭಟನೆ ಮಾಡುವ ಹಕ್ಕಿದೆ. ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ ಎಂದು ಮುಖ್ಯಂತ್ರಿಗಳು ಹೇಳಿದ್ದಾರೆ.ಮೂರು ಕ್ಷೇತ್ರಗಳ ಉಪಚುನಾವಣೆ ನಡೆದ ನಂತರ ಪ್ರತಿಭನೆ ಮುಗಿಯುತ್ತದೆ. ಆಗ ಬಿಜೆಪಿಯವರು ಮನೆಕಡೆ ಹೋಗ್ತಾರೆ ಎಂದು ವ್ಯಂಗ್ಯಮಾಡಿದ್ದಾರೆ.