ಬೆಂಗಳೂರು: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯನವರ ವಿರುದ್ದ ಮಾಡುತ್ತಿರುವ ಷಡ್ಯಂತ್ರ. ಸಿಎಂರನ್ನು ಮುಡಾ ಕೇಸಿನಲ್ಲಿ ಸಿಕ್ಕಿಹಾಕಿಸುವ ಪ್ಲಾನ್‌ ಆಗಿದೆ.ಯಾರು ಏನೇ ಮಾಡಿದರೂ ಸಿಎಂ ಸಿದ್ದರಾಮಯ್ಯನವರನ್ನು ಏನು  ಮಾಡಕ್ಕಾಗುವುದಿಲ್ಲವೆಂದು ಸಚಿವ ಹೆಚ್.ಸಿ.ಮಹದೇವಪ್ಪ ಹೇಳಿದ್ದಾರೆ.

ಮುಡಾ ಪ್ರಕರಣದ ತನಿಖೆ ಎದುರಿಸುವಂತೆ ನೀಡುರುವ ನೋಟಿಸ್‌ ವಿಚಾರದ ಕುರಿತು ಮಾತನಾಡಿದ ಅವರು,ಸಿಎಂ ಸಿದ್ದರಾಮಯ್ಯನವರಿಗೆ ನೋಟಿಸ್‌ ನೀಡಿರುವುದು ಪತ್ರಿಕೆಗಳ ಮುಖಾಂತರ ತಿಳಿದುಬಂದಿದೆ.ಸಿಎಂ ಕೂಡಾ ವಿಚಾರಣೆಗೆ ಹಾಜರಾಗ್ತಾರೆ.ಈ ಕುರಿತು ಸಿಎಂ ಸಿದ್ದರಾಮಯ್ಯನವರೇ ಪ್ರತಿಕ್ರಿಯಿಸಿದ್ದು, ವಿಚಾರಣೆಗೆ ಹೋಗುವುದಾಗಿ ತಿಳಿಸಿದ್ದಾರೆ.

ಸಿಎಂ ಸಿದ್ದರಾಮಯ್ಯನವರನ್ನು ಲೋಕಾಯುಕ್ತ ಸರಿಯಾಗಿ ತನಿಖೆ ಮಾಡುತ್ತಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಒಂದೇ. ಸಿಎಂ ಗೆ ಬೇರೆ ಕಾನೂನು, ಸಾಮಾನ್ಯರಿಗೆ ಬೇರೆ ಕಾನೂನು ಎನ್ನುವುದಿಲ್ಲ. ಕಾನೂನು ಯಾವತ್ತೂ ಬದಲಾಗುವುದಿಲ್ಲ, ಹಾಗೆಯೇ ಸೆಕ್ಷನ್‌ಗಳು ಬದಲಾಗುವುದಿಲ್ಲ.ಸಿಎಂರವರನ್ನು ಸರಿಯಾಗಿ ತನಿಖೆಗೆ ಒಳಪಡಿಸುವುದಿಲ್ಲ ಎನ್ನುವುದು ಕೆಲವರ ತಪ್ಪು ತಿಳುವಳಿಕೆ.ಮುಡಾ ಕೇಸ್‌ ಸಿದ್ದರಾಮಯ್ಯನವರನ್ನು ಖೆಡ್ಡಕ್ಕೆ ಕೆಡವಲು ಮಾಡಿರುವ ಷಡ್ಯಂತ್ರ. 40 ವರ್ಷಗಳಲ್ಲಿ ಒಂದು ಕಪ್ಪುಚುಕ್ಕೆ ಇಲ್ಲದೆ ಆಡಳಿತ ಮಾಡಿರುವ ಸಿದ್ದರಾಮಯ್ಯನವರು ಆರೋಪಮುಕ್ತರಾಗ್ತಾರೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *