ಪಿತಾಪುರಂ: ಚಲನಚಿತ್ರನಟ, ಆಂದ್ರಪ್ರದೇಶದ ಉಪಮುಖ್ಯಂತ್ರಿಯಾಗಿರುವ ಪವನ್ ಕಲ್ಯಾಣ್‌ರವರು ರಾಜ್ಯದಲ್ಲಿರುವ ಕಾನೂನು ಸವ್ಯವಸ್ಥೆಯ ಕುರಿತು ಆತಂಕ ವ್ಯಕ್ತಪಡಿಸಿದ್ದು, “ನಾನು ರಾಜ್ಯದ ಹೋಮ್ ಮಿನಿಷ್ಟರ್ ಆಗಿದ್ದರೆ “ ಪರಿಸ್ಥಿತಿ ಬೇರೆಯೇ ಆಗಿರುತ್ತಿತ್ತು” ಎಂಬ ಹೇಳಿಕೆಯನ್ನು ನೀಡಿದ್ದಾರೆ.
ಪಿತಾಪುರಂ ಕ್ಷೇತ್ರದ ಗೊಲ್ಲಪ್ರೋಲುದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿ ಮಾತನಾಡಿದ ಪವನ್ ಕಲ್ಯಾಣ್, ಸಾರ್ವಜನಿಕರ ನಿರೀಕ್ಷೆಗಳನ್ನೆಲ್ಲಾ ಈಡೇರಿಸುವಂತೆ ಕೇಳಿಕೊಂಡಿದ್ದರು.ಅದೇ ಸಮಯದಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ಕಾನೂನು ಸವ್ಯವಸ್ಥೆಯ ಕುರಿತ ರೀತಿಯನ್ನುಪ್ರಸ್ಥಾಪಿಸಿದ ಪವನ್ ಕಲ್ಯಾನ್ ಯೋಗಿ ಆದಿತ್ಯನಾಥ್ ರೀತಿಯಲ್ಲಿ ಅಪರಾಧಿಗಳಿಗೆ ಶಿಕ್ಷಯನ್ನು ವಿಧಿಸಬೇಕು.ಆ ರೀತಿ ಮಾಡದಿದ್ದರೆ ಅಪರಾಧಿಗಳಿಗೆ ಭಯವಿರುವುದಿಲ್ಲ, ಯಾರ ಮಾತನ್ನು ಕೇಳುವುದಿಲ್ಲ.ನೀವೂ ಕೂಡಾ ನಮ್ಮನ್ನು ಅವರ ಪರಿಸ್ಥಿತಿಗೆ ಒಳಪಡಿಸಿದ್ದೀರಾ” ಎಂದು ಹೇಳಿದ್ದಾರೆ.
ಆಂದ್ರಪ್ರದೇಶದ ರಾಜ್ಯದಲ್ಲಿ ಟಿಡಿಪಿಯ ಚಂದ್ರಬಾಬು ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಪಂಚಾಯತ್ ರಾಜ್,ಹಾಗೂ ಅರಣ್ಯ ಮತ್ತು ಪರಿಸರ ಇಲಾಖೆಯ ಖಾತೆಗಳನ್ನು ಪಡೆದಿದ್ದಾರೆ.