ಬೆಂಗಳೂರು: ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳು ಯಾವ್ದೆ ಕಾರಣಕ್ಕೂ ನಿಲ್ಲೋದಿಲ್ಲ. ಬಿಜೆಪಿ ಪಕ್ಷದಲ್ಲಿರುವವರು ಬಡವರ ವಿರೋಧಿಗಳಾಗಿರುವುದರಿಂದ ಗ್ಯಾಂಟಿ ಯೋಜನೆ ಜಾರಿಯಾದ ನಂತರ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ  ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಗ್ಯಾಂರಟಿ ಯೋಜನೆಗಳ ಪರಿಷ್ಕರಣೆ ವಿಷಯದ ಕುರಿತು ಮಾತನಾಡಿದ ಅವರು,ನಮ್ಮ ಕಾಂಗ್ರೆಸ್‌ ಸರ್ಕಾರ ಅಧಿಕಾರಾವಧಿಯಲ್ಲಿ ಇರುವ ತನಕ ಗ್ಯಾರಂಟಿ ಯೋಜನೆಗಳು ಇದ್ದೇ ಇರುತ್ತವೆ.ಬರುವ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಆಗಲೂ ಗಯಾರಂಟಿ ಯೋಜನೆಗಳು ಮುಂದುವರೆಯುತ್ತಲೇ ಇರುತ್ತವೆ. ಭಯ ಪಡುವ ಆಗತ್ಯವಿಲ್ಲ. ಬಿಜೆಪಿಗರ ಮಾತುಗಳಿಗೆ ತಲೆಕೆಡಿಸಿಕೊಳ್ಳಬೇಡಿ ಬಿಜೆಪಿ ಯಾವತ್ತಿದ್ದರೂ ಬಡವರ ವಿರೋಧಿ ಪಕ್ಷ .ಅವರು ಜನರಿಗೆ ಏನನ್ನೂ ನೀಡುವುದಿಲ್ಲ,ಕೊಟ್ಟವರನ್ನು ಸಹಿಸೊದಿಲ್ಲವೆಂದು ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ.

ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದಾಗ ಹೆಚ್ಚು ಸಾಲ ಮಾಡಿಕೊಂಡು ಸಾವಿರಾರು ಕೋಟಿ ಸಾಲವನ್ನಿಟ್ಟು ಹೋಗಿದ್ದರು, ಅಭಿವೃದ್ದಿಗೆ ಅಂತ ಹೇಳಿ ಆಲ ಮಾಡಿದ ಹಣದ ಸಾಲ ಕೂಡಾ ಹಾಗೇ ಇಟ್ಟಿದ್ದರು.ಅದನ್ನೇಲ್ಲಾ ಬಚ್ಚಿಟ್ಟು,ಈಗ ನಮ್ಮ ಮೇಲೆ ಗೂಬೆ ಕೂರಿಸಲು ಹೊರಟಿದ್ದಾರೆ.ಬಿಜೆಪಿಯವರು ತಿಪ್ಪರಲಾಗ ಹಾಕಿದ್ರೂ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲವೆಂದು ಸಚಿವ ರಾಮಲಿಮಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.ಅಧಿಕಾರದಲ್ಲಿದ್ದಾಗ

Leave a Reply

Your email address will not be published. Required fields are marked *