ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಪಡೆದಿರುವ ದರ್ಶನ್ ಬೆನ್ನು ನೋವಿನ ಚಿಕತ್ಸೆ ಪಡೆಯಲು ನಗರದ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದು ಎಲ್ಲಾ ರೀತಿಯ ಪರೀಕ್ಷೆಗಳನ್ನು ನಡೆಸಿದ ಡಾಕ್ಟರ್ ರಿಪೋರ್ಟ್ ಬಂದ ನಂತರ ಚಿಕೆತ್ಸೆಯನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.
ವಿಪರೀತ ಬೆನ್ನುನೋವಿನಿಂದ ಬಳಲುತ್ತಿರುವ ನಟ ದರ್ಶನ್‌ರವರ ಎಡ ಕಾಲು ಜೋಮು ಹಿಡಿದಂತಾಗಿ ನಡೆಯಲು ಕಷ್ಟಪಡುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲಾತಾಣದಲ್ಲಿ ಪ್ರಸಾರವಾಗುತ್ತಿವೆ.ಕಾಲು ಎಳೆದುಕೊಂಡು ನಡೆಯಲು ಎಣಗಾಡುತ್ತಿರುವ ದರ್ಶನ್ ಸ್ಥಿತಿಯನ್ನು ಕಂಡು ಅಭಿಮಾನಿಗಳು ಮರುಗುತ್ತಿದ್ದಾರೆ.
ವಿಪರೀತ ಕಾಲುನೋವಿನಿಂದ ನಡೆಯಲು ಆಗದಿರುವುದನ್ನು ದೃಶ್ಯದಲ್ಲಿ ಗಮನಿಸಬಹುದು.ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯಲು ಹೋಗುವಾಗ ಪತ್ನಿ ವಿಜಯಲಕ್ಷ್ಮೀ ಮತ್ತು ಗೆಳೆಯ ಧನ್ವೀರ್ ಸಹಾಯದಿಂದ ಎಡಗಾಲನ್ನು ಎತ್ತಿ ಇಡಲು ಸಾದ್ಯವಾಗದ ರೀತಿಯಲ್ಲಿ ನಡೆಯುತ್ತಿದ್ದಾರೆ.ದರ್ಶನ್ ಆಸ್ಪತ್ರೆಗೆ ದಾಖಲಾದ ನಂತರ ಬಿಜಿಎಸ್ ಆಸ್ಪತ್ರೆಯ ಭದ್ರತೆಯನ್ನು ಹೆಚ್ಚುಮಾಡಿದ್ದು, 50ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ಆಯೋಜಿಸಲಾಗಿದೆ.
6 ವಾರಗಳು ಮಾತ್ರವೇ ಜಾಮೀನು ಮಂಜೂರಾಗಿರುವ ಕಾರಣ ಅವರ ಆರೋಗ್ಯ ಸಮಸ್ಯೆ ಪರಿಹಾರವಾಗದೇ ಇದ್ದಲ್ಲಿ ಮಧ್ಯಂತರ ಜಾಮೀನನ್ನು ಹೆಚ್ಚು ಮಾಡಲು ಕೋರ್ಟಿಗೆ ಮನವಿಯನ್ನು ಮಾಡುವ ಸಾಧ್ಯತೆಗಳಿವೆ.