ಮುಂಬೈ: ಇನ್ನು 10 ದಿನದ ಒಳಗಾಗಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ ಬಾಬಾ ಸಿದ್ದಿಕಿಯಂತೆ ನಿಮ್ಮನ್ನು ಹತ್ಯೆ ಮಾಡಲಾಗುತ್ತದೆ ಎಂದು ಬೆದರಿಕೆ ಕರೆ ಬಂದಿದೆ.
ಮುಂಬೈ ಸಂಚಾರಿ ಪೊಲೀಸ್ ಕಂಟ್ರೋಲ್ ಪೋನಿಗೆ ಶನಿವಾರ ಸಂಜೆ ಅಪರಿಚಿತರಿಂದ ಅಪರಿಚಿತ ಸಂಖ್ಯೆಯಿಂದ ಸಂದೇಶ ಬಂದಿದ್ದು, ಅದರಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ ಬಾಬಾ ಸಿದ್ದಿಕಿಯಂತೆ ನಿಮ್ಮನ್ನು ಹತ್ಯೆ ಮಾಡಲಾಗುತ್ತದೆ ಎಂಬ ಸಂದೇಶ ಬಂದಿದೆ ಎನ್ನಲಾಗಿದೆ. ಈ ಸಂದೇಶವನ್ನು ಯಾರು ಯಾಕೆ ಕಳುಹಿಸಿದ್ದಾರೆ ಎಂಬುದರ ಇನ್ವೆಸ್ಟಿಗೇಷನ್ ನಡೆಯುತ್ತಿದೆ. ಎಂದು ಪೊಲೀಸರು ತಿಳಿಸಿದ್ದಾರೆ.
ಬೆದರಿಕೆಯ ಸಂದೇಶದ ಹಿನ್ನೆಲೆ ಸಿಎಂ ಆದಿತ್ಯನಾಥ್ರ ಭದ್ರತೆಯನ್ನು ಹೆಚ್ಚು ಮಾಡಲಾಗಿದೆ ಎನ್ನಲಾಗಿದೆ.