ಬೆಂಗಳೂರು: ಮಠ ಚಿತ್ರದ ನಿರ್ದೆಶಕರಾದ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.ಈ ಘಟನೆಯು ಬೆಂಗಳೂರಿನ ಮಾದನಾಯಕಹಳ್ಳಿಯ ಬಳಿಯಿರುವ ಅಪಾರ್ಟ್ಮೆಂಟಲ್ಲಿ ನಡೆದಿದೆ ಎನ್ನಲಾಗಿದೆ.
ಸ್ಯಾಂಡಲ್ವುಡ್ನ ಖ್ಯಾತ ನಿರ್ದೆಶಕರಾದ ನಟ ಗುರುಪ್ರಸಾದ್ರವರು ಹಲವಾರು ಸಿನಿಮಾಗಳಲ್ಲಿ ನಟರಾಗಿ, ನಿರ್ದೆಶಕರಾಗಿ ಕೆಲಸ ಮಾಡಿದ್ದ ಇವರು, ಹೆಚ್ಚು ಸಾಲವನ್ನು ಮಾಡಿಕೊಂಡಿದ್ದು ಸಾಲಗಾರರ ಕಿರುಕುಳ ತಾಳಲಾರದೆ , ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ತಾವು ವಾಸವಿರುವ ಅಪಾರ್ಟ್ಮೆಂಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ .
ಈ ಘಟನೆಯು ಮಾದನಾಯಕನ ಹಳ್ಳಿಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.