ಹುಬ್ಬಳ್ಳಿ: ಸಿಎಂ ಸಿದ್ದರಾಮಯ್ಯನವರೇ ನಿಮ್ಮ ನಾಲಗೆಯನ್ನು ಹದ್ದುಬಸ್ತಿನಲ್ಲಿಡಿ, ನಾಲಿಗೆ ಹೋದಂತೆ ಮಾತನಾಡಬೇಡಿ ಎಂದು ಸಿಎಂ ವಿರುದ್ದ ಪ್ರಹ್ಲಾದ್‌ ಜೋಶಿ ವಾಗ್ದಾಳಿ ನಡಸಿರುವುದು ತಿಳಿದುಬಂದಿದೆ.

ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಅವರು, ಪ್ರಧಾನಿ ಮೋದಿಯವರನ್ನು ಪುಡಾರಿ ಎಂದು ಮಾತನಾಡುವುದು ಎಷ್ಟು ಸರಿ? ಈ ರೀತಿ ಮಾತನಾಡುವುದರಿಂದ ನಿಮ್ಮ ಸಂಸ್ಕೃತಿಯನ್ನು ನೋಡಿಸುತ್ತದೆ. ಸತ್ಯ ಸಂಗತಿಗಳನ್ನು ಪ್ರದಾನಿ ಮೋದಿಯವರು ವಿಶ್ಲೇಶಿಸಿದ್ದಾರೆ ಅಷ್ಟೇ.ಅದಕ್ಕೆ ನೀವು ಆ ರೀತಿ ಮಾತನಾಡುವುದು ಸರಿಯಲ್ಲ.ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಯಾವುದೇ ರೀತಿಯ ಅಭಿವೃದ್ದಿಗಳಾಗುತ್ತಿಲ್ಲವೆಂದು ಸ್ವಪಕ್ಷದ ಶಾಸಕರೇ ಅಸಮಧಾನ ಹೊರಹಾಕುತ್ತಿದ್ದಾರೆ.ಈ ರೀತಿಯ ಹೇಳಿಕೆಗಳನ್ನು ನಿಮ್ಮ ಪಕ್ಷದ ಅಭ್ಯರ್ಥಿಗಳು ಮತ್ತು ಶಾಸಕರೇ ಹೇಳುತ್ತಿರುವಾಗ ಪ್ರಧಾನ ಮಂತ್ರಿಗಳು ಕೂಡಾ ಅದನ್ನೇ ಹೇಳಿದ್ದಾರೆ. ಅದಕ್ಕೆ ಸರಿಯಾದ ರೀತಿಯಲ್ಲಿ ಉತ್ತರವನ್ನು ನೀಡಿ ಸಮರ್ಥಿಸಿಕೊಳ್ಳಿ ಸಿಎಂ ಸಿದ್ದರಾಮಯ್ಯನ ವಿರುದ್ದ  ವಾಗ್ದಾಳಿ ನಡೆಸಿದ್ದಾರೆ.

Leave a Reply

Your email address will not be published. Required fields are marked *