ರಾಮನಗರ: ಕಾಂಗ್ರೆಸ್ಸಿನ ಹಗರಣಗಳನ್ನು ಮುಚ್ಚಿಹಾಕಲು ಜನರ ದಾರಿ ತಪ್ಪಿಸುವ ಸಲುವಾಗಿ ವಕ್ಫ್‌ ವಿಚಾರವನ್ನು ಮುನ್ನಲೆಗೆತಂದಿದ್ದಾರೆ.ಇದರಿಂದ ಮುಡಾಹಗರಣ, ವಾಲ್ಮೀಕಿ ನಿಗಮದ ಹಗರಣಳನ್ನು ಮುಚ್ಚಿಹಾಕುವ ತಂತ್ರವೆಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.

ತಿಟ್ಟಮಾರನಹಳ್ಳಿಯಲ್ಲಿ ಬೈಎಲೆಕ್ಷನ್‌ ಚುನಾವಣಾ ಪ್ರಚಾರದ ಸಮಯದಲ್ಲಿ ಮಾತನಾಡಿದ ಅವರು, ಕಾಂಗ್ರಸ್‌ ಗೌರ್ನಮೆಂಟ್‌ ತಮ್ಮ ಅಪರಾಧಗಳಿಂದನೇ ದೀವಾಳಿಯಾಗಲಿದೆ.ಸರ್ಕಾರವನ್ನು ಯಾರು ಕೆಡುವುದಿಲ್ಲ.ಬದಲಾಗಿ ಅವರೇ ಸ್ವತಃ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ ಎಂದು ಹೇಳಿದ್ದಾರೆ.

ಶಕ್ತಿಯೋಜನೆಯ ಬಗ್ಗೆ ಡಿಕೆಶಿ ನೀಡಿರುವ ಹೇಳಿಕೆಗಳನ್ನು ನೋಡಿದರೆ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತಾರೆ ಎನ್ನುವು ತಿಳಿಯುತ್ತದೆ.ಇನ್ನು ಚನ್ನಪಟ್ಟಣ ಕ್ಷೇತ್ರದಲ್ಲಿ ನಮ್ಮ ಪಕ್ಷದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ನನ್ನ ಕ್ಷೇತ್ರದಲ್ಲಿ ಎಷ್ಟು ಕೆರೆಗಳಿವೆ ಎಂಬುದು ನನಗೆ ಗೊತ್ತಿಲ್ಲವಂತೆ ಆದರೆ ಅವರಿಗೇನು ಗೊತ್ತು ನನಗೆ ಗೊತ್ತಿರುವಷ್ಟು ಅವರಿಗೆ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.‌

Leave a Reply

Your email address will not be published. Required fields are marked *