ಬೆಂಗಳೂರು: ಸಿಎಂ ಸಿದ್ದರಾಮಯ್ಯನವರು ಒಳಮೀಸಲಾತಿಯನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಬಿವೈ ವಿಜಯೇಂದ್ರ ಆರೋಪ ಮಾಡಿದ್ದಾರೆ
ಕಾಂಗ್ರೆಸ್ ಸರ್ಕಾರವೂ ಒಳಮೀಸಲಾತಿಯನ್ನು ಜಾರಿ ಮಾಡುವುದಾಗಿದ್ದರೆ, ಕಾಂತರಾಜ್ ವರದಿ ಅನುಷ್ಟಾನದ ಕುರಿತು ಈ ಹಿಂದೆಯೇ ಕ್ರಮವನ್ನ ಕೈಗೊಳ್ಳಬೇಕಿತ್ತು. ಆದರೆ ಮೂರು ವಿದಾನಸಭಾ ಕ್ಷೇತ್ರಗಳ ಉಪಚುನಾವಣೆಯ ಸಮಯದಲ್ಲಿ ಘೋಷಣೆ ಮಾಡಿರುವ ಕಾರಣ ಪರಿಶಿಷ್ಟ ಪಂಗಡಗಳಿಗೆ ಒಳಮೀಸಲಾತಿಯ ಆಮಿಷವನ್ನೊಡ್ಡಿ ರಾಜಕೀಯ ತಂತ್ರವನ್ನು ಹೆಣೆದು ರಾಜಕೀಯವಾಗಿ ಲಾಭ ಪಡೆಯುವ ಹುನ್ನಾರದ ದೃಷ್ಟಿಯಿಂದ ಒಳಮೀಸಲಾತಿ ಜಾರಿ ಮಾಡುತ್ತೇವೆಂದು ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ನಿರ್ಧಾರ ಮಾಡಲಾಗಿದೆ ಎಂಬ ಹೇಳಿಕೆಯನ್ನು ನೀಡಿದ್ದಾರೆ ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ.
ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿಯನ್ನು ನೀಡಲು ಕಾಂಗ್ರೆಸ್ ಸರ್ಕಾರ ಒಪ್ಪಿಗೆಯನ್ನುನೀಡಿದ್ದು, ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ಸಮ್ಮುಖದಲ್ಲಿ ಪ್ರಾಯೋಗಿಕ ದತ್ತಾಂಶಗಳನ್ನು ಸಂಗ್ರಹಿಸಲು ಆಯೋಗವನ್ನು ರಚನೆ ಮಾಡಲು ಚಿಂತನೆ ನಡೆಸಿದೆ.