ನಮ್ಮೆಲ್ಲರ ಅಚ್ಚಮೆಚ್ಚನ ಅಪ್ಪು ನಮ್ಮನ್ನಗಲಿ ಇಂದಿಗೆ 3 ವರ್ಷ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿಗೆ ಕುಟುಂಬದವರೆಲ್ಲಾ ಸೇರಿ ವಿಷೇಶವಾದ ಪೂಜೆಯಲ್ಲಿ ಸಲ್ಲಿಸಿದ್ದಾರೆ.
ಪುನೀತ್ ಸಮಾಧಿಯ ಪೂಜೆಯ ನಂತರ ಮಾತನಾಡಿದ ರಾಘಣ್ಣ, ಅಪ್ಪುನ ಕಳೆದುಕೊಂಡು ಇಂದಿಗೆ ಮೂರು ವರ್ಷವಾಗಿದೆ.ವರ್ಷ ಮೂರು ಮರೆಯದ ನೆನಪು ಎಂದು ಮಗನಂತಿದ್ದ ಸಹೋದರ ಪುನೀತ್ ರಾಜ್‌ಕುಮಾರ್‌ರವರನ್ನು ಸ್ಮರಣ ಮಾಡಿಕೊಂಡಿದ್ದಾರೆ.
ನಾವೆಲ್ಲರೂ ಪ್ರತಿದಿನ ಪ್ರತಿಕ್ಷಣ ಪುನೀತ್‌ನನ್ನು ನೆನಪು ಮಾಡಿಕೊಳ್ಳುತ್ತೇವೆ.ಅವನಿಲ್ಲದ ದಿನಗಳನ್ನು ಕಷ್ಟದಿಂದ ಕಳೆಯುತ್ತೀದ್ದೇವೆ.ನಾಡಿನ ಜನರಿಗೆಲ್ಲಾ ಅಪ್ಪು ಮೇಲೆ ಎಂಥಾ ಅಗಾಧ ಪ್ರೀತಿ, ಅಪ್ಪು ಮೇಲಿನ ಪ್ರೀತಿ ಕಮ್ಮಿಯಾಗಿಲ್ಲ. ಅಪ್ಪು ಅಭಿಮಾನಿಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲಿದ್ದಾರೆ. ಅಪ್ಪು ಅಗಲಿ ಮೂರು ವರ್ಷಗಳು ಕಳೆದಿವೆ, ಮರೆಯದ ನೂರು ನೆನಪುಗಳಿವೆ. ಪ್ರತಿದಿನ ಆತನಿಲ್ಲ ಎನ್ನುವ ನೋವಿನಲ್ಲೇ ಕಾಲವನ್ನು ಕಳೆಯುತ್ತಿದ್ದೇವೆ ಎಂದು ರಾಘಣ್ಣ ಭಾವುಕರಾಗಿದ್ದಾರೆ.
ಜನರು ಪುನೀತ್ ಮೇಲೆ ಎಷ್ಟು ಪ್ರೀತಿಯನ್ನಿಟ್ಟುಕೊಂಡಿದ್ದಾರೆ ಎಂದರೆ ಅಪ್ಪು ಹುಟ್ಟುಹಬ್ಬವನ್ನು ಸ್ಪೂರ್ತಿದಿನ ಎಂದು ಆಚರಿಸುತ್ತಾರೆ.ನಿಮ್ಮೆಲ್ಲರ ಪ್ರೀತಿಗೆ ಬೆಲೆ ಕಟ್ಟಲು ಸಾದ್ಯವಿಲ್ಲ.ಅಪ್ಪು ನಮ್ಮನೆ ಮಗ ಮಾತ್ರವಲ್ಲದೇ ನಿಮ್ಮೆಲ್ಲರ ಪ್ರೀತಿಯ ಮಗನಾಗಿದ್ದಾನೆ ಎಂದು ಹೇಳಿದ್ದಾರೆ.