ಮೈಸೂರು: ಸಿಎಂ ಸಿದ್ದರಾಮಯ್ಯನಿಗೆ ಸಮಸ್ಯೆಗಳೇನಾದರೂ ಬಂದೊರಗಿದರೆ ತಟ್ ಅಂತ ಹಿಂದೂ ದೇವರುಗಳು ನೆನಪಾಗ್ತಾರೆ ಎಂದು ಮಾಜಿ ಸಚಿವ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದರೆ.
ಮೈಸೂರಿನಲ್ಲಿಂದು ಮಾತನಮಾಡಿದ ಅವರು, ಸಿಎಂ ಸಿದ್ದರಾಮಯ್ಯನಿಗೆ ಮುಡಾ ಸಂಕಷ್ಟ ಎದುರಾದಾಗ ನಮ್ಮ ಹಿಂದೂ ದೇವರುಗಳಾದ ಹಾಸನಾಂಬೆ ತಾಯಿ, ಚಾಮುಂಡಿ ತಾಯಿ.ನೆನಪಾಗಿದ್ದಾರೆ. ಸಂಕಟ ಬಂದಾಗ ವೆಂಕಟರಮನಯ್ಯ ಎನ್ನುವ ಹಾಗೆ ಆಯಿತು ಅವರ ಕಥೆ. ಕಷ್ಟಗಳು ಬಂದಾಗ ನಮ್ಮ ದೇವರುಗಳು ಕಾಪಾಡುತ್ತವೆ ಹೊರತಾಗಿ ಬೇರೆ ಧರ್ಮದ ದೇವರುಗಳಲ್ಲ ಎಂದು ಕಿಡಿಕಾರಿದ್ದಾರೆ.
ಸಿಎಂ ಸಿದ್ದರಾಮಯ್ಯನವರು ಹಿಂದೂಗಳ ವಿರುದ್ದ ನಿಂತುಕೊಳ್ಳುವುದಿಲ್ಲವೆಂದು ತಿಳಿದುಕೊಂಡಿದ್ದೇವೆ. ಪ್ರದಾನಿಯವರು ಮೊದಲು ವಕ್ಫ್ ಕಾಯ್ದೆ, ವಕ್ಫ್ ಬೋರ್ಡ್ ರದ್ದು ಮಾಡಬೇಕೆಂದು ಆಗ್ರಹಿಸಿದ್ದಾರೆ.
ಅದೇ ಸಮಯದಲ್ಲಿ ಮುಡಾ ವಿಚಾರವನ್ನು ಮಾತನಾಡಿದ ಅವರು, ಮುಡಾ ಪ್ರಕರಣ ತನಿಖೆ ಪ್ರಾರಂಭವಾದ ಮೇಲೆ ಮುಡಾ ಕ್ಲೀಯರ್ ಆಗಬಹುದು ಎಂಬ ನಂಬಿಕೆ ನಮಗಿದೆ. ಮೈಸೂರು ನಗರಿಗೆ ನಗರಾಭಿವೃದ್ದಿ ಪ್ರಾಧಿಕಾರ ಬೇಕು ಮತ್ತು ಒಳೆಳೆಯ ಜನಪ್ರತಿನಿಧಿ ನಾಯಕರ ಅವಶ್ಯಕತೆ ಇದೆ ಎಂದಿದ್ದಾರೆ.