ಬಿಜೆಪಿಯ 8 ಶಾಸಕರು ಕಾಂಗ್ರೆಸ್‌ಗೆ ಸೇರ್ಪಡೆ ಆಗಲಿದ್ದಾರೆ ಎಂಬ ಹೇಳಿಕೆಯನ್ನು ನೀಡಿದ ಎಸ್. ಟಿ.ಸೋಮಶೇಖರ್‌ ಹೇಳಿಕೆಗೆ ತಿರುಗೇಟನ್ನು ನೀಡಿರುವ ಶಾಸಕ ಭೈರತಿ ಬಸವರಾಜ್‌ ಸೋಮಶೇಖರ್‌ರವರು ಬಾಯಿಗೆ ಬಂದಂತಹ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಲಿ ಎಂದು ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈಯಕ್ತಿಕ ಲಾಭಕ್ಕಾಗಿ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹೀಗೆ ಹುಚ್ಚುಹುಚಾಗಿ ಹೇಳಿಕೆಗಳನ್ನು ನೀಡುವುದು ಮೊದಲು ನಿಲ್ಲಿಸಲಿ. ಈ ರೀತಿ ಹೇಳಿಕೆಗಳನ್ನು ನೀಡುತ್ತಾ ಬೇರೆಯವರಿಗೆ ತೇಜೊವಧೆ ಮಾಡುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಪಕ್ಷದ ಯಾವ ಶಾಸಕರೂ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗುವುದಿಲ್ಲ.ಅವರು ಸುಮ್ಮನೇ ಊಹೇ ಮಾಡಿಕೊಂಡು ಹೇಳಿಕೆಗಳನ್ನು ನೀಡ್ಬಾರದು.ಯಾವ ಶಾಸಕರು ಹೋಗ್ತಾರೆಂದು ಗೊತ್ತಿದ್ದರೆ ಅವರ ಹೆಸರನ್ನು ಬಹಿರಂಗಪಡಿಸಲಿ ಅದನ್ನು ಬಿಟ್ಟು ಸುಕಾಸುಮ್ಮನೆ ಹೇಳಿಕೆಗಳನ್ನು ನೀಡುವುದಲ್ಲವೆಂದು ಹೇಳಿದ್ದಾರೆ.
ಈಗಾಗಲೇ ನಾವು ಕಾಂಗ್ರೆಸ್‌ ಪಕ್ಷವನ್ನು ಬಿಟ್ಟು ಬಂದಿದ್ದೇವೆ .ಈಗ ಬಿಜೆಪಿಯ ಕಟ್ಟಾಳುಗಳಾಗಿ ಪಕ್ಷದ ಏಳಿಗೆಗಾಗಿ ದುಡಿಯುತ್ತಿದ್ದೇವೆ. ಯಾರು ಕೂಡಾ ಕಾಂಗ್ರೆಸ್‌ಗೆ ಹೋಗುವುದಿಲ್ಲವೆಂದಿದ್ದಾರೆ.

Leave a Reply

Your email address will not be published. Required fields are marked *