ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯದ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದ್ದು ಮಕ್ಕಳು, ವೃದ್ದರು, ಮತ್ತು ಜನರು ಸಮಸ್ಯೆಯನ್ನು ಎದುರಿಸುವ ಸಂಭವವಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮುನ್ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ದೆಹಲಿ ಸುತ್ತಮುತ್ತಲಿನ ವಾಯು ಗುಣಮಟ್ಟದ ಸೂಚ್ಯಂಕವೂ 405 ರಷ್ಟಿದ್ದು, ಅಪಾಯದ ಮಟ್ಟ ದಾಟಿದ್ದು, ಕೇಂದ್ರಿಯ ಮಾಲಿನ್ಯ ನಿಯಂತ್ರಣ ಮಂಡಳಿಯು ಈ ವಲಯವನ್ನು ಗಂಭೀರ ವರ್ಗದಲ್ಲಿ ಇಟ್ಟಿದೆ.ಇದೆ ವೇಳೆ ಸಿಪಿಸಿಬಿಯ ಪ್ರಕಾರ ಅಕ್ಷರಧಾಮ ದೇವಸ್ಥನದ ಸುತ್ತಮುತ್ತಲಿನ ಎಕ್ಯೂಎಲ್ (AQI) 361 ದಾಖಲಾಗಿದೆ
ಮುಂದಿನ ದಿನಗಳಲ್ಲಿ ರಾಕಧಾನಿಯ ಜನರು ಕಲುಷಿತ ಗಾಳಿ ಉಸಿರಾಡಬೇಕಾಗುತ್ತದೆ ವಾಯುಗುಣಮಟ್ಟ ಸೂಚ್ಯಂಕ (AQI) 300ಕ್ಕಿಂತ ಹೆಚ್ಚಾಗಬಹುದು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮುನ್ಸೂಚನೆಯನ್ನ ನೀಡಿದ್ದು,ಈ ಪರಿಸ್ಥಿತಿಯು ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸುತ್ತದೆ.
ದೀಪಾವಳಿ ಹಬ್ಬಕ್ಕೆ ಮುನ್ನವೇ ದೆಹಲಿ ವಾಯು ಮಾಲಿನ್ಯವೂ ಹೆಚ್ಚಾಗಿದ್ದು ಈ ಮಾಲಿನ್ಯವನ್ನು ನಿಯಂತ್ರಣ ಮಾಡಲು ಡೆಲ್ಲಿ ಗೌರರ್ನಮೆಂಟ್‌ನ ಪರಿಸರ ಸಚಿವ ಗೋಪಾಲ್‌ರೈ ಎನ್‌ಸಿಆರ್‌ನಲ್ಲಿ ಹಬ್ಬದ ಸಮಯದಲ್ಲಿ ಪಟಾಕಿಯನ್ನು ಸಂಪೂರ್ಣವಾಗಿ ಬಂದ್ ಮಾಡಲು ಮನವಿಯನ್ನು ಮಾಡಿದ್ದು, ನೆರೆ ರಾಜ್ಯಗಳಲ್ಲಿ ಹುಲ್ಲು ಸುಡುವ ಪ್ರಕ್ರಿಯೆಯನ್ನು ಕಡಿಮೆ ಮಾಡಲು ವಿನಂತಿಸಿದ್ದಾರೆ ಎನ್ನಲಾಗಿದೆ.