ಬೆಂಗಳೂರು: ನಗರದಲ್ಲಿ ಸುರಿದ ಬಾರೀ ಮಳೆಯಿಂದ ರಸ್ತೆಯಲ್ಲಿರುವ ಹಳ್ಳಗಳಲ್ಲಿ ನೀರುತುಂಬಿಕೊಂಡು ರಸ್ತೆಗಳು ಅಕ್ಷರಶಃ ಕೆರೆಯಂತಾಗಿದ್ದವು.ಇದೀಗ ಮಳೆಯಿಂದ ಹಾನಿಯಾದ ರಸ್ತೆಗಳನ್ನು ಮುಚ್ಚುವ ಕೆಲಸವನ್ನು ಬಿಬಿಎಂಪಿ ಮಾಡುತ್ತಿದ್ದು, ನಗರದಲ್ಲಿ ಇಲ್ಲಿಯವೆರಗೂ 14 ಸಾವಿರ ಗುಂಡಿಗಳನ್ನು ಮುಚ್ಚಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಳೆಯಿಂದ ಹಾನಿಗೀಡಾಗಿರುವ ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ 14 ಸಾವಿರ ರಸ್ತೆ ಗುಂಡಿಗಳನ್ನು ಮುಚ್ಚಿದ್ದೇವೆ. ಮತ್ತೆಯೂ ಮಳೆ ಬಂದಿದ್ದರಿಂದ ಮತ್ತಷ್ಟು ಗುಂಡಿಗಳು ಆಗಿದ್ದು, ಅವನ್ನೂ ಮುಚ್ಚಲು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.