ಮಂಡ್ಯ: 5 ವರ್ಷದವರೆಗೂ ರಾಜ್ಯ ಸರ್ಕಾರ ಅಧಿಕಾರವನ್ನು ಪೂರ್ಣಗೊಳಿಸುವುದಿಲ್ಲ .ಜನತೆ ಬಯಸಿದರೆ ಮತ್ತೆ ನಾನು ಸಿಎಂ ಆಗುತ್ತೇನೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್‌ವೊಂದನ್ನು ಸಿಡಿಸಿದ್ದಾರೆ.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ಕೆ, ರಾಜ್ಯದ ಜನತೆ ಬಯಸಿದರೆ ನಾನು ಮತ್ತೆ ಸಿಎಂ ಆಗುತ್ತೇನೆ ? ಜನರು ನನ್ನನ್ನು ಮುಖ್ಯಮಂತ್ರಿಯಾಗಿ ಸ್ವೀಕರಿಸುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಮುಖ್ಯಮಂತ್ರಿಯಾಗುವ ಆಕಾಂಕ್ಷೆಯನ್ನು ತೆರೆದಿಟ್ಟಿದ್ದಾರೆ.

ಈಗಿನ ರಾಜಕೀಯ ಬೆಳವಣಿಗೆಯನ್ನು ನೋಡುತ್ತಿದ್ದರೆ, ಜನರು ರಾಜ್ಯ ಸರ್ಕಾರವನ್ನು ವಜಾಮಾಡುತ್ತಾರೆ. 2028ರ ತನಕ ಕಾಂಗ್ರೆಸ್‌ ಅಧಿಕಾರವನ್ನು ಮುಂದುವರೆಸುವುದು ಅಸಾದ್ಯವಾಗಿದ್ದು, ಸ್ವಪಕ್ಷದ ಶಾಸಕರೇ ಸರ್ಕಾರದ ವಿರುದ್ದ ಅಸಮಧಾನವನ್ನು ಹೊರಹಾಕುತ್ತಿದೆ. ಆದ್ದರಿಂದ ನಾನೇ ಸಿಎಂ ಆಗ್ತೇನೆ ಎಂಬ ಸ್ಪೋಟಕ ಹೇಳಿಕೆಯನ್ನು ನೀಡಿದ್ದಾರೆ.

Leave a Reply

Your email address will not be published. Required fields are marked *