ಬೆಳಗಾವಿ: ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾಗ ಗೃಹಲಕ್ಷ್ಮೀ ಹಣವನ್ನು ಜನರು ಹಲವು ರೀತಿಯಲ್ಲಿ ಬಳಕೆ ಮಾಡುತ್ತಿದ್ದು, ಇದೀಗ ಬಡ ರೈತ ಕುಟುಂಬವೊಂದು ವ್ಯವಸಾಯಕ್ಕೆ ಅನುಕೂಲವಾಗಿದೆ ಎಂದು ಸಿದ್ದರಾಮಯ್ಯನ ಸರ್ಕಾರಕ್ಕೆ ಕೃತಘ್ನತೆಯನ್ನು ಸಲ್ಲಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕ್‌ ತಾಲ್ಲೂಕಿನ ತವಕ ಗ್ರಾಮದಲ್ಲಿರುವ ಬಸವ್ವ ಶಿವಪ್ಪ ಬುಳ್ಳಿ ಎಂಬ ದಂಪತಿಗಳು ಕೃಷಿ ಕೆಲಸಕ್ಕೆ ಅನುಕೂಲವಾಗುವಂತೆ ಗೃಹಲಕ್ಷ್ಮೀ ಹಣವನ್ನು ಕೂಡಿಟ್ಟುಕೊಂಡು ಎತ್ತು ಖರೀದಿ ಮಾಡಿದ್ದಾರೆ.ಅವರ ಮನೆಯಲ್ಲಿ ಒಂದೇ ಒಂದು ಎತ್ತು ಇದ್ದಿದ್ದರಿಂದ ಕೃಷಿ ಮಾಡಲು ಕಷ್ಟವಾಗಿತ್ತು. ಆದ್ದರಿಂದ 11 ತಿಂಗಳ ಗೃಹಲಕ್ಷ್ಮೀ ಹಣವನ್ನು ಕೂಡಿಟ್ಟುಕೊಂಡು 22 ಸಾವಿರ ಹಣದಿಂದ ಬಸವ್ವ ಎತ್ತು ಖರೀದಿಸಿದ್ದಾರೆ.

ಬಸಪ್ಪ ಮತ್ತು ಶಿವಪ್ಪ ದಂಪತಿಗಳು ವ್ಯವಸಾಯವನ್ನು ನಂಬಿಕೊಂಡು ಬದುಕು ಸಾಗಿಸುತ್ತಿರುತ್ತಾರೆ ಎಂಬ ವಿಷಯವನ್ನು ತಿಳಿದ ಕೂಡಲೇಗೋಕಾಕ್‌ ತಾಲ್ಲೂಕಿನ ಗ್ಯಾರಂಟಿ ಸಮಿತಿಯ ಅಧ್ಯಕ್ಷ ಮಾಹಾಂತೇಶ್‌ ಕಡಾಡಿ ಭೇಟಿ ನೀಡಿ ಮಾತನಾಡಿಸಿದ್ದಾರೆ.

ಮಹಾಂತೇಶ್‌ ಕಡಾಡಿಯ ಜೊತೆ ಮಾತನಾಡಿದ ಬಸವ್ವ ಬುಳ್ಳಿ” ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ಗೃಹಲಕ್ಷ್ಮೀ ಹಣ ನಮ್ಮ ಬದುಕಿಗೆ ಬೆಳಕಾಗಿದೆ.ಒಂದೇ ಎತ್ತಿನ ಸಹಾಯದಿಂದ ವ್ಯವಸಾಯ ಮಾಡುತ್ತಿದ್ದೇವು. ಗೃಹಲಕ್ಷ್ಮೀ ಹಣವನ್ನು ಕೂಡಿಟ್ಟುಕೊಂಡು ಮತ್ತೊಂದು ಎತ್ತು ಖರೀದಿ ಮಾಡಿರುವುದರಿಂದ ನಮಗೆ ತುಂಬಾ ಅನುಕೂಲವಾಗಿದೆ ಆದ್ದರಿಂದ ಸಿಎಂ ಸಿದ್ದರಾಮಯ್ಯನವರಿಗೆ ಎಷ್ಟು ಕೃತಘ್ನತೆ ಸಲ್ಲಿಸಿದರೂ ಕಡಿಮೆಯೇ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *