ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ ಪ್ರಕರಣಕ್ಕೆ ಸಂಬಂಧಿಸಿದ ಎ-13 ಆರೋಪಿ ದೀಪಕ್‌ಗೆ ಜಾಮೀನು ಮಂಜುರಾಗಿರುವ ಕಾರಣ ಜೈಲಿನಿಂದ ಬಿಡುಗಡೆಯಾಗಿದ್ದಾನೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲು ಸೇರಿದ್ದ ದೀಪಕ್ ಇಂದು ಪರಪ್ಪನ ಅಗ್ರಹಾರದ ಜೈಲಿನಿಂದ ಬಿಡುಗಡೆಯಾಗಿದ್ದಾನೆ.
ನಟ ದರ್ಶನ್ ಮತ್ತು ಸಂಗಡಿಗರಿಗೆ ಇನ್ನೂ ಜಾಮೀನು ಸಿಗದಿರುವ ಕಾರಣ , ದರ್ಶನ್ ಹೈಕೋರ್ಟ್‌ಗೆ ಜಾಮೀನು ಕೋರಿ ಅರ್ಜಿಯನ್ನು ಸಲ್ಲಿಸಿದ್ದು ಅಕ್ಟೋಬರ್22ಕ್ಕೆ ಅರ್ಜಿಯ ವಿಚಾರಣೆಯನ್ನು ನಿಗದಿಪಡಿಸಿದೆ ನ್ಯಾಯಾಲಯ ಎನ್ನಲಾಗಿದೆ.