ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲು ಪಾಲಾಗಿರುವ ದರ್ಶನ್ಗೆ ಬೇಲ್ ಸಿಗದೆ ಮತ್ತೆ ಜೈಲು ಪಾಲಾಗಿದ್ದಾರೆ.
ಕೊಲೆ ಆರೋಪದಲ್ಲಿ ಎ2 ಆರೋಪಿಯಾಗಿರುವ ದರ್ಶನ್ ಜಾಮೀನು ಅರ್ಜಿಯನ್ನು ನಗರದ 57 ನೇ ಸಿಸಿಹೆಚ್ ಕೋರ್ಟ್ ವಜಾ ಮಾಡಿದ್ದು ನಟ ದರ್ಶನ್ಗೆ ಬಾರೀ ನಿರಾಸೆಯುಂಟಾಗಿದೆ. ಮುಂದೇನು ಎಂಬ ಯೋಚನೆಯಲ್ಲಿರುವ ಅವರು ಕಾನೂನಿನ ಹೋರಾಟದಲ್ಲಿ ಬಾರೀ ಹಿನ್ನಡೆಯನ್ನು ಹೊಂದಿದ್ದು ಮತ್ತೆ ಜೈಲಿನ ಅತಿಥಿಯಾಗಿದ್ದಾರೆ ಎಂದರೆ ತಪ್ಪಾಗಲಾರದು.
ಮತ್ತೊಂದು ಕಡೆ ಎ1 ಆರೋಪಿಯಾಗಿರುವ ಪವಿತ್ರಾಗೌಡರ ಜಾಮೀನು ಅರ್ಜಿಯನ್ನು ಕೋರ್ಟ್ ನಿರಾಕರಿಸಿದೆ ಎನ್ನಲಾಗಿದೆ.