ಬೆಂಗಳೂರು: ಸಿಎಂ ಸಿದ್ದರಾಮಯ್ಯನವರ ರೀತಿಯಲ್ಲೇ ಖರ್ಗೆ ಕುಟುಂಬದವರು ವಾಪಸ್ ನೀಡುವುದನ್ನು ನೋಡಿದರೆ ನಾವು ಮಾಡುತ್ತಿರುವ ಹೋರಾಟಗಳಿಗೆ ಭ್ರಷ್ಟರು ಮಣಿಯುತ್ತಿದ್ದಾರೆ ಎಂದು ಬಿಜೆಪಿ ಪೋಸ್ಟ್ ಮಾಡಿದೆ.
ಕಾಂಗ್ರೆಸ್ಸಿನ ನಾಯಕರು ಅಕ್ರಮವಾಗಿ ಪಡೆದಿರುವ ನಿವೇಶನಗಳನ್ನು ಕೋರ್ಟಿನ ಮೆಟ್ಟಿಲು ಏರುವ ಮುಂಚೆ ಹಿಂದಿರುಗಿಸಿದರೆ ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳಬಹುದೆಂದು ಲೆಕ್ಕಾಚಾರ ಮಾಡಿದ್ದಾರೆ ಆದರೆ ಕಾನೂನಿನ ಕಣ್ಣಿಂದ ಯಾರೂ ತಪ್ಪಿಸಿಕೊಳ್ಳಲು ಸಾದ್ಯವಿಲ್ಲ. ಆಮೀಷಗಳನ್ನೊತ್ತು ಅಧಿಕಾರಕ್ಕೆ ಬಂದು ಲೂಟಿ ಮಾಡುತ್ತಿರುವ ಭ್ರಷ್ಟ ಸರ್ಕಾರವನ್ನು ಬೇರು ಸಮೇತ ಕಿತ್ತುಹಾಕಲಾಗುತ್ತದೆ ಎಂದಿದ್ದಾರೆ.