ಗದಗ : ಮಾಜಿ ಮುಖ್ಯಮಂತ್ರಿ ಈಶ್ವರಪ್ಪ ಮತ್ತು ಬಿವೈ ವಿಜಯೇಂದ್ರರ ಕೋಲ್ಡ್‌ ವಾರ್‌ ನಡೆಯುತ್ತಿದ್ದು, ಒಬ್ಬರ ಮೇಲೊಬ್ಬರು ಆರೋಪಗಳನ್ನು ಮಾಡಿಕೊಳ್ಳುತ್ತಲೇ ಇರುವುದು ನಮಗೆ ತಿಳಿದಿರುವ ವಿಷಯ ಆದರೀಗ ಈಶ್ವರಪ್ಪನವರು ಒಂದು ಹೆಜ್ಜೆ ಮುಂದೆ ಹೋಗಿ ಈ ರೀತಿಯ ಹೇಳಿಕೆಯನ್ನು ನೀಡಿದ್ದಾರ ಅದು ಹೀಗಿದೆ,ಬಿವೈ ವಿಜಯೇಂದ್ರ ಕಾಂಗ್ರೆಸ್ಸಿನ ಜೊತೆಗೆ ಸೇರ್ಕೊಂಡು 10 ಸಾವಿರ ಮತಗಳಿಂದ ಗೆದ್ದಿದ್ದಾರೆ ಎಂದು ಈಶ್ವರಪ್ಪನವರು ಬಿವೈ ವಿಜಯೇಂದ್ರನ ವಿರುದ್ದ ವಾಗ್ದಾಳಿಯನ್ನು ನಡೆಸಿದ್ದಾರೆ.
ಗದಗ್‌ನಲ್ಲಿ ಮಾತನಾಡಿದ ಈಶ್ವರಪ್ಪ, ಬಿಜೆಪಿ ಪಕ್ಷದಲ್ಲಿ ಹಿಂದೂತ್ವದ ಸಿದ್ದಂತಗಳಿಲ್ಲ, ಹಿಂದುತ್ವವನ್ನು ಹೊರತುಪಡಿಸಿ ಸ್ವಜನ ಪಕ್ಷಪಾತವನ್ನು ಮಾಡುತ್ತಿದೆ. ಪಕ್ಷದಲ್ಲಿ ಹಿಂದುತ್ವಕ್ಕೆ ಸರಿಯಾದ ಬೆಲೆ ಸಿಗಬೇಕೆಂದು ಹೇಳಿರುವ ಇವರು, ಇಷ್ಟಬಂದಂತೆ ರಾಜಕಾರಣ ಮಾಡುತ್ತಿರುವವರಿಗೆ ಲಗಾಮು ಹಾಕಬೇಕು. ಬಿಜೆಪಿ ಕೂಡಾ ಕುಟುಂಬ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್‌ ನೀಡಿರುವ ಭಿಕ್ಷಯಿಂದ ಬಿವೈ ವಿಜಯೇಂದ್ರ ಶಾಸಕರಾಗಿದ್ದಾರೆ ಎಂದು ಡಿಕೆ ಶಿವಕುಮಾರ್‌ ಹೇಳಿಕೆ ನೀಡಿದ್ದರೂ ಇದುವರೆಗೂ ಬಿಜೆಪಿ ರಾಜ್ಯಾದ್ಯಕ್ಷರು ಉತ್ತರವನ್ನು ಕೊಟ್ಟಿಲ್ಲ.ಕಾಂಗ್ರೆಸ್‌ ಪಕ್ಷದವರ ಜೊತೆ ಅಡ್ಜಸ್ಟ್‌ ಮಾಡಿಕೊಂಡು 10 ಸಾವಿರ ಮತಗಳಿಂದ ಗೆಲವು ಪಡೆದಿದ್ದಾರೆ. ಇವರಿಬ್ಬರ ನಡುವೆ ಯಾವ ರೀತಿ ಹೊಂದಾಣಿಕೆಯಾಗಿತ್ತು ಎನ್ನುವುನ್ನು ಡಿಸಿಎಂ ಬಹಿರಂಗ ಮಾಡಲಿ, ಒಳಗೊಳಗೆ ಪ್ಲಾನ್‌ ಮಾಡಿ ಹೊಂದಾಣಿಕೆಯ ರಾಜಕಾರಣ ಮಾಡುತ್ತಿದ್ದಾರೆ, ಹೊಂದಾಣಿಕೆಯ ರಾಜಕಾರಣಕ್ಕೆ ಬ್ರೇಕ್‌ ಬೀಳಲೇಬೇಕು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *